ಯುಟಿವಿ ಕಚೇರಿ ದಾಂದಲೆ ಪ್ರಕರಣ: ರವಿ ಪೂಜಾರಿ ವಿರುದ್ಧ ಚಾರ್ಜ್‌ಶೀಟ್

ಕರಾವಳಿ ಕರ್ನಾಟಕ ವರದಿ
ಬೆಂಗಳೂರು: ಇಂದಿರಾನಗರ ಸಿಎಂಎಚ್ ರಸ್ತೆಯಲ್ಲಿನ ಯುಟಿವಿ ಕಚೇರಿಗೆ ನುಗ್ಗಿ ದಾಂದಲೆಗೈದು, ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಪ್ರಕರಣದಲ್ಲಿ ಪಾತಕಿ ರವಿ ಪೂಜಾರಿ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ.

ಕುಖ್ಯಾತ ರೌಡಿ ರವಿ ಪೂಜಾರಿಯ ಏಳು ಸಹಚರರು ಯುಟಿವಿ ಕಚೇರಿಗೆ ನುಗ್ಗಿ ಮಾಲಕ ರೋನಿ ಅವರಿಗೆ ಬೆದರಿಕೆ ಸಂದೇಶ ಕಳಿಸಿದ್ದ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಚಾರ್ಜ್‌ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಜು.11,2009ರಂದು ನಡೆದಿದ್ದ ಈ ಪ್ರಕರಣದಲ್ಲಿ ಭದ್ರತಾ ಸಿಬಂದಿ ಮತ್ತು ಇನ್ನೊಬ್ಬ ವ್ಯಕ್ತಿ ಜಮದ್ ಅಹ್ಮದ್ ಎಂಬವರು ಮಾತ್ರ ಇದ್ದರು. ಈ ಸಂದರ್ಭ ಜಮದ್ ಅವರ ಮೇಲೆ ಹಲ್ಲೆಗೈಯಲಾಗಿತ್ತು.

ರೋನಿ ದಾವೂದ್ ಇಬ್ರಾಹಿಂಗೆ ಪ್ರಾಶಸ್ತ್ಯ ನೀಡುವ ಮೂಲಕ ತನ್ನನ್ನು ಲೆಕ್ಕಿಸುತ್ತಿಲ್ಲ ಎಂದು ವಿದೇಶದಲ್ಲಿದ್ದ ರವಿ ಪೂಜಾರಿ ಕೋಪಗೊಂಡು ಬೆದರಿಕೆ ಒಡ್ಡಿದ್ದ ಎಂದು ಪೊಲೀಸ್ ತನಿಖೆ ಸಂದರ್ಭ ತಿಳಿದುಬಂದಿತ್ತು.

Get real time updates directly on you device, subscribe now.