ಎನ್‌ಕೌಂಟರ್‌ನಲ್ಲಿ ಆರು ನಾಗಾ ಬಂಡುಕೋರರ ಹತ್ಯೆ

ಕರಾವಳಿ ಕರ್ನಾಟಕ ವರದಿ
ನವ ದೆಹಲಿ: ಅರುಣಾಚಲ ಪ್ರದೇಶದ ತಿರಪ್ ಜಿಲ್ಲೆಯ ಖೊನ್ಸಾ ಬಳಿ ಇಂದು ಬೆಳಗಿನ ಜಾವ ನಡೆದ ಎನ್‌ಕೌಂಟರ್‌ನಲ್ಲಿ ಆರು ನಾಗಾ ಬಂಡುಕೋರರನ್ನು(ಎನ್‌ಎಸ್‌ಸಿಎನ್) ಸೇನಾ ಪಡೆಗಳು ಹತ್ಯೆಗೈದಿವೆ.

ಈ ಸಂದರ್ಭ ಅಸ್ಸಾಂ ರೈಫಲ್ಸ್‌ನ ಒಬ್ಬ ಯೋಧ ಗಾಯಗೊಂಡಿದ್ದಾನೆ ಎಂದು ಸೇನೆಯ ಮೂಲಗಳು ತಿಳಿಸಿವೆ.

ಬೆಳಗಿನ ಜಾವ 4:30ಸುಮಾರಿಗೆ ಎನ್‌ಕೌಂಟರ್ ನಡೆದಿತ್ತು. ಆರು ಶಸ್ತ್ರಾಸ್ತ್ರಗಳನ್ನು ಘಟನಾ ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ.

 

Get real time updates directly on you device, subscribe now.