ಚಿಕ್ಕಮಗಳೂರು: ಮಂಗಳೂರಿಗೆ 12ಲಕ್ಷ ರೂ. ಮೌಲ್ಯದ ಗಾಂಜಾ ಸಾಗಾಟ, ಆರೋಪಿಗಳ ಬಂಧನ

ಜಿಲ್ಲೆಯ ಇತಿಹಾಸದಲ್ಲೇ ಮೊದಲ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಗಾಂಜಾವನ್ನು ಪೋಲಿಸರು ವಶ ಪಡಿಸಿಕೊಂಡ ಪ್ರಕರಣ.

ಕರಾವಳಿ ಕರ್ನಾಟಕ ವರದಿ
ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಗೋಣಿಬೀಡು ಮೇಲುಪೇಟೆ ಮಸೀದಿ ಬಳಿ ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಮೊಹಿದ್ ಖಾನ್, ಮೂಡಿಗೆರೆಯ ಅಕ್ಬರ್ ಪಾಷಾ, ಶಾಹಿದ್ ಖಾನ್ ಹಾಗೂ ಪ್ರಭ ಎಂಬವರನ್ನು ಬಂಧಿಸಿ ಐವತ್ತು ಕೆಜಿ ಗಾಂಜಾ, ಕಾರು, ಬೈಕ್ ವಶಪಡಿಸಿಕೊಳ್ಳಲಾಗಿದೆ. ಗಾಂಜಾದ ಮೌಲ್ಯ 12ಲಕ್ಷ ರೂ.ಗೂ ಅಧಿಕವಾಗಿದೆ.

ವಿಶಾಖಪಟ್ಟಣದ ಪಾಲೇರು ಎಂಬಲ್ಲಿ ಶೇಖರ್ ಎಂಬವನಿಂದ 80ಕೆ.ಜಿ ಗಾಂಜಾ ಸೊಪ್ಪನ್ನು ಆರೋಪಿಗಳು ತಂದಿದ್ದು, 30ಕೆ.ಜಿ ಸೊಪ್ಪನ್ನು ಸಕಲೇಶಪುರದಲ್ಲಿ ಮಾರಿದ್ದರು. 50ಕೆ.ಜಿ ಗಾಂಜಾವನ್ನು ಮಂಗಳೂರಿನಲ್ಲಿ ಇನ್ನೂ ಹೆಚ್ಚಿನ ದರಕ್ಕೆ ಮಾರಲು ಒಯ್ಯುತ್ತಿರುವಾಗ ಪೊಲೀಸ್ ಬಲೆಗೆ ಬಿದ್ದಿದ್ದಾರೆ.

ಇನ್ಸ್ಪೆಕ್ಟರ್ ರಕ್ಷಿತ್ ಮತ್ತು ಪಿಎಸ್ಸೈ ರಮ್ಯಾ ಹಾಗೂ ಪೊಲೀಸ್ ತಂಡದ ಕಾರ್ಯಾಚರಣೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ಲಾಘಿಸಿದ್ದಾರೆ.

 

Get real time updates directly on you device, subscribe now.