ಉತ್ತರಕನ್ನಡ: 40 ಜನರಲ್ಲಿ ಕೊರೊನಾ ಪಾಸಿಟಿವ್

ಶಿರಸಿ ಮಾರಿಕಾಂಬಾ ದೇವಸ್ಥಾನದ ಸಿಬ್ಬಂದಿಗಳಿಗೂ ಕೊರೊನಾ

ಕರಾವಳಿ ಕರ್ನಾಟಕ ವರದಿ/ರವಿತೇಜ ಕಾರವಾರ
ಕಾರವಾರ:
ಉತ್ತರ ಕನ್ನಡದಲ್ಲಿ ದಿನೇ ದಿನೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಸಾಗಿದ್ದು ಶನಿವಾರ ಶನಿವಾರ ಬರೋಬ್ಬರಿ 40 ಪ್ರಕರಣಗಳು ದೃಢಪಟ್ಟಿವೆ.

ಶ್ರೀ ಮಾರಿಕಾಂಬಾ ದೇವಸ್ಥಾನದ 12 ಸಿಬ್ಬಂದಿಗಳು ಸೇರಿ ಶಿರಸಿಯಲ್ಲಿ ಅತೀ ಹೆಚ್ಚು 25 ಪ್ರಕರಣಗಳು ದಾಖಲಾದರೆ ಹಳಿಯಾಳದಲ್ಲಿ 6, ಹೊನ್ನಾವರ, ಕಾರವಾರ, ಕುಮಟಾ ಮುಂಡಗೋಡದಲ್ಲಿ ತಲಾ 2 ಪ್ರಕರಣಗಳು ಹಾಗೂ ಭಟ್ಕಳದಲ್ಲಿ 1 ಪ್ರಕರಣ ದಾಖಲಾಗಿದೆ.

ಸದ್ಯ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 585 ಕ್ಕೇರಿದ್ದು, 233 ಜನ ಸೋಂಕಿತರು ಗುಣಮುಖರಾಗಿದ್ದಾರೆ. 348 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಜಿಲ್ಲೆಯಲ್ಲಿ ಇದುವರೆಗೆ ನಾಲ್ವರು ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ.

ಶನಿವಾರ ದೃಢಪಟ್ಟ ಪ್ರಕರಣಗಳಲ್ಲಿ ಶಿರಸಿಯ ಸೋಂಕಿತ ಸಂ. ಪಿ.23156 ನ ಸಂಪರ್ಕಕ್ಕೆ ಬಂದ 7 ವರ್ಷದ ಬಾಲಕಿ, 51, 35, 32, 19, 55 ವರ್ಷದ ಮಹಿಳೆಯರಲ್ಲಿ, 53, 25, 47, 56, 25, 31, 43, 30, 24, 53, 55, 54, 42, 38 ಹಾಗೂ 42 ವರ್ಷ ಪುರುಷರಲ್ಲಿ ಸೋಂಕು ದೃಢ ಪಟ್ಟಿದೆ. ಇನ್ನು ಸೋಂಕಿತ ಸಂ. 18269 ಸಂಪರ್ಕಕ್ಕೆ ಬಂದ 34 ವರ್ಷದ ಮಹಿಳೆ, ಸೋಂಕಿತ ಸಂ. 18270 ಸಂಪರ್ಕಕ್ಕೆ ಬಂದ 11 ವರ್ಷದ ಬಾಲಕನಲ್ಲಿ ಜೊತೆಗೆ ಮುಂಬೈನಿAದ ವಾಪಸ್ಸಾಗಿದ್ದ 28 ವರ್ಷದ ಯುವಕ ಹಾಗೂ 24 ವರ್ಷದ ಯುವತಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದು ಒಟ್ಟಾರೆ ಶಿರಸಿಯಲ್ಲಿ 25 ಪ್ರಕರಣಗಳು ದೃಢಪಟ್ಟಿವೆ.

ಮುಂಡಗೋಡದಲ್ಲಿ ಸೋಂಕಿತ ಸಂ. 23158 ನ ಸಂಪರ್ಕಕ್ಕೆ ಬಂದ 26 ವರ್ಷದ ಯುವಕನಿಗೆ ಕೊರೊನಾ ದೃಢಪಟ್ಟರೆ, 51 ವರ್ಷದ ಇನ್ನೋರ್ವನಲ್ಲಿ ಸೋಂಕು ದೃಢಪಟ್ಟಿದ್ದು ಸಂಪರ್ಕ ಪತ್ತೆಯಾಗಿಲ್ಲ.

ಕುಮಟಾದಲ್ಲಿ 73 ವರ್ಷದ ವೃದ್ಧನಿಗೆ ಸೋಂಕು ದೃಢಪಟ್ಟಿದ್ದು ಸಂಪರ್ಕ ಇನ್ನೂ ಪತ್ತೆಯಾಗಿಲ್ಲ. ಇನ್ನು ಮುಂಬೈಯಿಂದ ವಾಪಸ್ಸಾಗಿದ್ದ 42 ವರ್ಷದ ಪುರುಷನಲ್ಲಿ ಕೊರೊನಾ ಸೋಂಕು ಇರುವುದು ದೃಢ ಪಟ್ಟಿದೆ.

ಕಾರವಾರದಲ್ಲಿ ಗೋವಾದಿಂದ ವಾಪಸ್ಸಾಗಿದ್ದ 40 ವರ್ಷದ ಪುರುಷನಿಗೆ ಹಾಗೂ ಸೋಂಕಿತ ಸಂ. ಪಿ-25449 ಸಂಪರ್ಕಕ್ಕೆ ಬಂದಿದ್ದ 42 ವರ್ಷದ ಮಹಿಳೆಯಲ್ಲಿ ಪಾಸಿಟಿವ್ ಬಂದಿದೆ.

ಹಳಿಯಾಳದಲ್ಲಿ ಸೋಂಕಿತ ಸಂ. 12062 ಸಂಪರ್ಕಕ್ಕೆ ಬಂದ 26 ಹಾಗೂ 35 ವರ್ಷದ ಯುವಕರಲ್ಲಿ, ಕುವೈಟ್‌ನಿಂದ ವಾಪಸ್ಸಾಗಿದ್ದ 33 ವರ್ಷದ ಯುವಕನಲ್ಲಿ ಸೋಂಕು ದೃಢ ಪಟ್ಟಿದ್ದು 56 ವರ್ಷದ ಮಹಿಳೆ, 27 ವರ್ಷದ ಯುವತಿ ಹಾಗೈ 12 ವಷ್ದ ಬಾಲಕನಲ್ಲಿಯೂ ಕೊರೊನಾ ಸೋಂಕು ದೃಢ ಪಟ್ಟಿದು ಈ ಮೂವರ ಸಂಪರ್ಕ ಇನ್ನೂ ಪತ್ತೆಯಾಗಿಲ್ಲ.

ಹೊನ್ನಾವರದ ಸೋಂಕಿತ ಸಂ.24097 ಸಂಪರ್ಕಕ್ಕೆ ಬಂದಿದ್ದ 33 ವರ್ಷದ ಯುವಕ ಹಾಗೂ ಕುವೈತ್‌ನಿಂದ ವಾಪಸ್ಸಾಗಿದ್ದ 35 ವರ್ಷದ ಯುವಕನಲ್ಲಿ ಸೋಂಕು ದೃಢಪಟ್ಟಿದೆ.

ಇನ್ನು ಕಳೆದ ಹಲವು ದಿನಗಳಲ್ಲಿ ಅತೀ ಹೆಚ್ಚು ಪ್ರಕರಣಗಳು ಕಂಡು ಬರುತ್ತಿದ್ದ ಭಟ್ಕಳದಲ್ಲಿ ಶುಕ್ರವಾರದಿಂದ ಸೋಂಕಿತರ ಸಂಖ್ಯೆ ಇಳಿಕೆ ಕಂಡು ಬಂದಿದ್ದು ಶನಿವಾರ 40 ವರ್ಷದ ಪುರುಷನಲ್ಲಿ ಒಂದು ಪ್ರಕರಣ ಮಾತ್ರ ದೃಢಪಟ್ಟಿದ್ದರೂ ಸಂಪರ್ಕ ಪತ್ತೆಯಾಗದ ಕಾರಣ ಆತಂಕ ಸೃಷ್ಠಿಯಾಗಿದೆ.

ಒಟ್ಟಾರೆ ಜಿಲ್ಲೆಯಲ್ಲಿ ಕೋವಿಡ್-19 ತನ್ನ ನಾಗಾಲೋಟವನ್ನು ಎಲ್ಲ ತಾಲೂಕುಗಳಲ್ಲಿಯೂ ಮುಂದುವರಿಸಿದ್ದು ಇವುಗಳಲ್ಲಿ ಹಲವಾರು ಪ್ರಕರಣಗಳ ಮೂಲವೇ ಪತ್ತೆಯಾಗದಿರುವುದು ಮಾತ್ರ ಸಾವ್ಜನಿಕರ ಆತಂಕ ಹೆಚ್ಚಾಗಲು ಕಾರಣವಾಗಿದೆ.

 

 

Get real time updates directly on you device, subscribe now.