ಕಾರವಾರ: ಆರು ಮಂದಿ ಕೋವಿಡ್ ಸೋಂಕಿತರು ಗುಣಮುಖ

ಕರಾವಳಿ ಕರ್ನಾಟಕ ವರದಿ/ರವಿತೇಜ ಕಾರವಾರ
ಕಾರವಾರ: ಕಿಮ್ಸ್ ಕೋವಿಡ್ ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೊನಾ ಸೋಂಕಿತರಲ್ಲಿ ಆರು ಮಂದಿ ಗುಣಮುಖರಾದ ಹಿನ್ನೆಲೆಯಲ್ಲಿ ಅವರನ್ನು ಶನಿವಾರ ಬಿಡುಗಡೆ ಮಾಡಲಾಗಿದೆ.

ಜೂನ್ 25 ರಂದು ದಾಖಲಾಗಿದ್ದ ಮುಂಡಗೋಡದ 23 ವರ್ಷದ ಯುವತಿ, ಜೂನ್ 26 ರಂದು ದಾಖಲಾದ ಅಂಕೋಲಾದ 45 ವರ್ಷದ ಪುರುಷ, ಜುಲೈ 2 ರಂದು ದಾಖಲಾಗಿದ್ದ ಹಳಿಯಾಳದ 2 ವರ್ಷದ ಹೆಣ್ಣು ಮಗು, ಮುಂಡಗೋಡದ 24 ವರ್ಷದ ಯುವತಿ, ದಾಂಡೇಲಿಯ 24 ವರ್ಷದ ಯುವತಿ ಹಾಗೂ ಜುಲೈ 3 ರಂದು ದಾಖಲಾಗಿದ್ದ ಮುಂಡಗೋಡದ 73 ವರ್ಷದ ವೃದ್ಧ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.

Get real time updates directly on you device, subscribe now.