ಜು.14ರ ರಾತ್ರಿಯಿಂದ ಒಂದು ವಾರ ಬೆಂಗಳೂರು ಲಾಕ್‌ಡೌನ್

ಕರಾವಳಿ ಕರ್ನಾಟಕ ವರದಿ
ಬೆಂಗಳೂರು: ಕೋವಿಡ್ ಭೀತಿ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಜುಲೈ14ರ ಮಂಗಳವಾರ ರಾತ್ರಿ 8ಗಂಟೆಯಿಂದ ಒಂದು ವಾರದ ತನಕ (ಜುಲೈ22ರ ಬೆಳಿಗ್ಗೆ 5ಗಂಟೆ) ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಪೂರ್ತಿ ಲಾಕ್‌ಡೌನ್ ಮಾಡಲು ನಿರ್ಧರಿಸಿದೆ. ಸಿಎಂ ಯಡಿಯೂರಪ್ಪ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.

ದಿನಸಿ, ಆಸ್ಪತ್ರೆಗಳು, ಹಾಲು, ಹಣ್ಣು, ತರಕಾರಿ, ಔಷಧ ಮುಂತಾದ ದಿನ ಬಳಕೆ ಅಗತ್ಯ ವಸ್ತುಗಳು ಈ ಅವಧಿಯಲ್ಲಿ ಲಭ್ಯವಿರುತ್ತವೆ.

ನಿಗದಿಯಾಗಿರುವಂತೆ ವೈದ್ಯಕೀಯ ಪದವಿ ಮತ್ತು ಸ್ನಾತಕೋತ್ತರ ಪರೀಕ್ಷೆಗಳು ನಡೆಯಲಿವೆ.

ಸಾಮಾಜಿಕ ಅಂತರ, ಕೋವಿಡ್ ಮಾರ್ಗದರ್ಶಿ ಸೂತ್ರ ಪಾಲಿಸಿ ಕೋವಿಡ್ ನಿಯಂತ್ರಣಕ್ಕೆ ಸಹಕರಿಸಿ ಎಂದು ಸಿಎಂ ವಿನಂತಿಸಿದ್ದಾರೆ.

Get real time updates directly on you device, subscribe now.