ಕುಂದಾಪುರ: ಸಿನೆಮಾ ನಿರ್ಮಾಪಕ ಆತ್ಮಹತ್ಯೆ

‘ನನ್ನನ್ನು ಕ್ಷಮಿಸಿ. ಎಲ್ಲರಿಗೂ  ಒಳ್ಳೆಯದಾಗಲಿ. ನನ್ನ  ಸಾವಿಗೆ ಯಾರೂ ಕಾರಣರಲ್ಲ’ ಎಂದು ಡೆತ್ ನೋಟ್.

‘ಭೂಮಿಕ ಪ್ರೊಡಕ್ಷನ್’ ಹೆಸರಿನ ಭರತ್ ನಾವುಂದ  ನಿರ್ದೇಶಿಸಿದ  ಚಲನಚಿತ್ರಕ್ಕೆ 28  ಲಕ್ಷ ರೂಪಾಯಿ ಹೂಡಿದ್ದ ನಿವೃತ್ತ ಬ್ಯಾಂಕ್ ಉದ್ಯೋಗಿ.

ಕರಾವಳಿ ಕರ್ನಾಟಕ ವರದಿ
ಕುಂದಾಪುರ : ‘ಭೂಮಿಕ ಪ್ರೊಡಕ್ಷನ್’ ಹೆಸರಿನ ಭರತ್ ನಾವುಂದ  ನಿರ್ದೇಶಿಸಿದ  ಚಲನಚಿತ್ರಕ್ಕೆ 28  ಲಕ್ಷ ರೂಪಾಯಿ ಹೂಡಿದ್ದ ನಿವೃತ್ತ ಬ್ಯಾಂಕ್ ಉದ್ಯೋಗಿ, ಹಣ ವಾಪಾಸ್  ಸಿಗದ ಕಾರಣ  ಮಾನಸಿಕವಾಗಿ ನೊಂದು ಖಿನ್ನತೆಗೆ ಒಳಗಾಗಿ  ಆತ್ಮಹತ್ಯೆಗೈದಿದ್ದಾರೆ.

ಬೀಜಾಡಿ ಗ್ರಾಮದ ಎನ್‌ಹೆಚ್‌ 66  ಪಕ್ಕದ ಲಕ್ಷ್ಮೀ ಗ್ಲಾಸ್ ಫ್ಲೈವುಡ್ ಅಂಗಡಿ ಹೊರಗಡೆ ಮಾಡಿನ ಆ್ಯಂಗ್ಲರ್ ಪಟ್ಟಿಗೆ ಹಗ್ಗದ ಸಹಾಯದಿಂದ ಕುತ್ತಿಗೆಗೆ ನೇಣು ಹಾಕಿಕೊಂಡು ನಾಗೇಶ್ ಕುಮಾರ್(64)  ಆತ್ಮಹತ್ಯೆ  ಮಾಡಿಕೊಂಡಿದ್ದಾರೆ.

‘ನನ್ನನ್ನು  ಕ್ಷಮಿಸಿ. ಎಲ್ಲರಿಗೂ ಒಳ್ಳೆಯದಾಗಲಿ. ನನ್ನ ಸಾವಿಗೆ ಯಾರೂ ಕಾರಣರಲ್ಲ’ ಎಂದು ಡೆತ್  ನೋಟ್ ಬರೆದಿಟ್ಟಿದ್ದಾರೆ. ಈ ಬಗ್ಗೆ ಅವರ ಮಗ ಐಶ್ವರ್ಯ ಕೆ. ಅವರು ನೀಡಿದ ದೂರಿನಂತೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Get real time updates directly on you device, subscribe now.