ಬೆಳ್ತಂಗಡಿ: ಕೋವಿಡ್ ಸೋಂಕಿತ ಮೃತ್ಯು

ಪುತ್ತೂರು ತಾಲೂಕಿನ ಮಾಡ್ನೂರು ಗ್ರಾಮದ ವ್ಯಕ್ತಿ ಕೂಡ ಇಂದು ಕೋವಿಡ್ ಸೋಂಕಿನಿಂದ ಸಾವಪ್ಪಿದ್ದಾರೆ.

ಕರಾವಳಿ ಕರ್ನಾಟಕ ವರದಿ
ಬೆಳ್ತಂಗಡಿ: ತಾಲೂಕಿನ ಕುವೆಟ್ಟು ಪಿಲಿಚಂಡಿಕಲ್ಲು ನಿವಾಸಿ, ಅರವತ್ತು ವರ್ಷದ ವ್ಯಕ್ತಿಯೋರ್ವರು ಕೋವಿಡ್ ಸೋಂಕಿನಿಂದ ಇಂದು ಬೆಳಿಗ್ಗೆ ಮನೆಯಲ್ಲೇ ಮೃತಪಟ್ಟಿದ್ದಾರೆ.

ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಎರಡು ದಿನ ಹಿಂದೆ ಅವರ ಗಂಟಲು ದ್ರವ ಪರೀಕ್ಷಿಸಲಾಗಿತ್ತು. ಇಂದು ಬಂದ ವರದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ.

ತಹಶೀಲ್ದಾರ್ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಕೋವಿಡ್ ಮಾರ್ಗಸೂಚಿಯಂತೆ ಮೃತರ ಅಂತ್ಯಸಂಸ್ಕಾರಕ್ಕೆ ಕ್ರಮಕೈಗೊಳ್ಳಲಾಗುತ್ತದೆ.

ಪುತ್ತೂರು: ಸೋಂಕಿತ ವ್ಯಕ್ತಿ ಸಾವು

ಇಂದು ಬೆಳಿಗ್ಗೆ ಐವತ್ತು ವರ್ಷದ ಕೋವಿಡ್ ಸೋಂಕಿತ ವ್ಯಕ್ತಿ ಸಾವಪ್ಪಿದ್ದಾರೆ. ತಾಲೂಕಿನ ಮಾಡ್ನೂರು ಗ್ರಾಮದ ವ್ಯಕ್ತಿ ಜ್ವರದ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಸಂದರ್ಭ ಕೋವಿಡ್ ಸೋಂಕು ದೃಢಪಟ್ಟಿತ್ತು. ಇವರ ಸಾವಿನೊಂದಿಗೆ ಪುತ್ತೂರು ತಾಲೂಕಿನಲ್ಲಿ ಕೋವಿಡ್ ಸೋಂಕಿಗೆ ಇಬ್ಬರು ಬಲಿಯಾದಂತಾಗಿದೆ.

Get real time updates directly on you device, subscribe now.