ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಟಿ, ರೂಪದರ್ಶಿ ದಿವ್ಯಾ ಚೌಸ್ಕೆ ಮೃತ್ಯು

ಕ್ಯಾನ್ಸರ್‌ನಿಂದ ಬಳಲುತ್ತಿದ್ದ ದಿವ್ಯಾ ಚೌಸ್ಕಿ ಅವರು ಶನಿವಾರ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ತನ್ನ ಸಾವಿನ ಸುಳಿವು ನೀಡಿದ್ದರು.

‘ನಾನು ಸಾವನ್ನು ಎದುರು ನೋಡುತ್ತಿದ್ದೇನೆ. ಧೈರ್ಯವಾಗಿದ್ದೇನೆ. ಕಷ್ಟಗಳಿಲ್ಲದ ಇನ್ನೊಂದು ಜೀವನ ಅಲ್ಲಿರಲಿ’ಎಂದಿದ್ದ ನಟಿ.

ಕರಾವಳಿ ಕರ್ನಾಟಕ ವರದಿ
ನವ ದೆಹಲಿ: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ‘ಹೈ ಅಪ್ನಾ ದಿಲ್ ತೊ ಅವಾರಾ’ ಚಿತ್ರದ ನಟಿ, ರೂಪದರ್ಶಿ ದಿವ್ಯಾ ಚೌಸ್ಕೆ ಮೃತಪಟ್ಟಿದ್ದಾರೆ.

ಕ್ಯಾನ್ಸರ್‌ನಿಂದ ಬಳಲುತ್ತಿದ್ದ ದಿವ್ಯಾ ಚೌಸ್ಕಿ ಅವರು ಶನಿವಾರ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ತನ್ನ ಸಾವಿನ ಸುಳಿವು ನೀಡಿದ್ದರು. ನಾನು ಸಾವನ್ನು ಎದುರು ನೋಡುತ್ತಿದ್ದೇನೆ. ಧೈರ್ಯವಾಗಿದ್ದೇನೆ. ಕಷ್ಟಗಳಿಲ್ಲದ ಇನ್ನೊಂದು ಜೀವನ ಅಲ್ಲಿರಲಿ. ಯಾವುದೇ ಪ್ರಶ್ನೆಗೆ ಉತ್ತರಿಸಲು ಆಗುತ್ತಿಲ್ಲ ಕ್ಷಮಿಸಿ ಎಂದಿದ್ದರು.

ಇನ್ನೊಂದು ಪೋಸ್ಟ್‌ನಲ್ಲಿ ನನಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಕ್ಯಾನ್ಸರ್ ನನ್ನನ್ನು ಕೊಲ್ಲುತ್ತಿದೆ. ಮಾತಾಡಲೂ ಆಗುತ್ತಿಲ್ಲ. ನಾನು ಸಲೀಸಾಗಿ ಕೊನೆಯುಸಿರೆಳೆಯುವಂತೆ ಪ್ರಾರ್ಥನೆ ಮಾಡಿ ಎಂದಿದ್ದರು.

ದಿವ್ಯಾ ಚೌಸ್ಕಿ ಮೃತಪಟ್ಟಿದ್ದಾರೆ ಎಂದು ಹೇಳಲು ತುಂಬಾ ನೋವಾಗುತ್ತಿದೆ. ಆಕೆ ಇಂದು ನಮ್ಮನ್ನು ಅಗಲಿದ್ದಾರೆ ಎಂದು ಅವರ ಸಂಬಂಧಿ ಫೇಸ್‌ಬುಕ್ ನಲ್ಲಿ ತಿಳಿಸಿದ್ದಾರೆ.

ದಿವ್ಯಾ ಚೌಸ್ಕಿ ಇನ್ಸ್ಟಾಗ್ರಾಂ ಪೋಸ್ಟ್

“Words cannot suffice what I want to convey, the more the less, since it’s been months am absconded and bombarded with plethora of messages. It’s time I tell you guys, I am on my death bed. S**t happens. I am strong. Be there another life of non suffering. No questions please. Only god knows how much you mean to me. DC Bye.

Get real time updates directly on you device, subscribe now.