ಕೆ‌ಎಸ್‌ಆರ್‌ಟಿಸಿ ನೌಕರರಿಗೆ ವೇತನರಹಿತ ರಜೆ ಕಾರ್ಮಿಕ ವಿರೋಧಿ, ಅಮಾನವೀಯ: ಸಿದ್ದರಾಮಯ್ಯ

ಕೆಎಸ್‌ಆರ್‌ಟಿಸಿ ಮೇಲ್ಪಂಕ್ತಿಯನ್ನು ಇತರ ಇಲಾಖೆಗಳು ಮತ್ತು‌ ಖಾಸಗಿ ಕಂಪೆನಿಗಳು ಅನುಸರಿಸಿದರೆ ಲಕ್ಷಾಂತರ ಕಾರ್ಮಿಕರ ಕುಟುಂಬದ ಪಾಡೇನು?

ರಾಜ್ಯ ಸರ್ಕಾರ ದಿವಾಳಿಯಾಗಿದೆಯೇ?’ ಎಂದು ಸರಕಾರವನ್ನು ಕಟುವಾಗಿ ಪ್ರಶ್ನಿಸಿದ್ದಾರೆ ವಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ.

ಕರಾವಳಿ ಕರ್ನಾಟಕ ವರದಿ
ಬೆಂಗಳೂರು: ‘ಕೆಎಸ್‌ಆರ್‌ಟಿಸಿ ನೌಕರರಿಗೆ 1 ವರ್ಷ ವೇತನರಹಿತ ರಜೆ ನೀಡುವ ಮುಖ್ಯಮಂತ್ರಿಗಳ ಆಲೋಚನೆ ಕಾರ್ಮಿಕ ವಿರೋಧಿ ಮಾತ್ರವಲ್ಲ ಅಮಾನವೀಯ ಕೂಡಾ’ ಎಂದು ವಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಕೆಎಸ್‌ಆರ್‌ಟಿಸಿಯ ಮೇಲ್ಪಂಕ್ತಿಯನ್ನು ಇತರ ಇಲಾಖೆಗಳು ಮತ್ತು‌ ಖಾಸಗಿ ಕಂಪೆನಿಗಳು ಅನುಸರಿಸಿದರೆ ಲಕ್ಷಾಂತರ ಕಾರ್ಮಿಕರ ಕುಟುಂಬದ ಪಾಡೇನು? ರಾಜ್ಯ ಸರ್ಕಾರ ದಿವಾಳಿಯಾಗಿದೆಯೇ?’ ಎಂದು ಸರಕಾರವನ್ನು ಕಟುವಾಗಿ ಪ್ರಶ್ನಿಸಿದ್ದಾರೆ.

ಜನರು ಪ್ರಯಾಣ ಮಾಡದ ಕಾರಣಕ್ಕೆ ನೌಕರರಿಗೆ ಕೆಲಸವಿಲ್ಲದೇ ಇದ್ದರೆ ಆಸಕ್ತ ನೌಕರರಿಗೆ ಇತರ ಕೆಲಸ ನೀಡುವ ಮೂಲಕ ಅವರ ಸೇವೆ ಬಳಸಿಕೊಳ್ಳಲು ಯೋಜಿಸಬೇಕು. ಇದರ ಬದಲು ಸಂಬಳ ನೀಡುವುದಿಲ್ಲ ಎಂಬುದು ಕ್ರೌರ್ಯದ ಪರಮಾವಧಿ.

ಸರಕಾರ ತನ್ನ ಆಲೋಚನೆ ಕೈಬಿಟ್ಟು ನೌಕರರಿಗೆ ಸಮರ್ಪಕ ಸಂಬಳ ನೀಡುವ ಮೂಲಕ ಅವರ ಕುಟುಂಬದ ಹಿತಾಸಕ್ತಿ ರಕ್ಷಿಸಬೇಕೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

Get real time updates directly on you device, subscribe now.