ಹೊನ್ನಾಳಿ: ರಾಂಪುರ ಮಠಾಧೀಶ ಹಾಲಸ್ವಾಮಿ ಕೊರೋನಾ ಸೋಂಕಿನಿಂದ ಮೃತ್ಯು

ತೀವೃ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಜು.9 ರಂದು ಆಸ್ಪತ್ರೆಗೆ ಕರೆತರಲಾಗಿತ್ತು.

ಕರಾವಳಿ ಕರ್ನಾಟಕ ವರದಿ
ಶಿವಮೊಗ್ಗ: ಹೊನ್ನಾಳಿ ತಾಲೂಕಿನ ರಾಂಪುರದ ಮಠಾಧೀಶ ಹಾಲಸ್ವಾಮಿ(55) ಕೋವಿಡ್ ಸೋಂಕಿನಿಂದ ಮೆಗ್ಗಾನ್ ಆಸ್ಪತ್ರೆಯ ಕೋವಿಡ್ ಕೇಂದ್ರದಲ್ಲಿ ಬುಧವಾರ ಮೃತಪಟ್ಟಿದ್ದಾರೆ.

ತೀವೃ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಹಾಲಸ್ವಾಮಿ ಮಠದ ಶ್ರೀ ಹಾಲಶಂಕರ ವಿಶ್ವಾರಾಧ್ಯ ಸ್ವಾಮೀಜಿ ಅವರನ್ನು ಜು.9 ರಂದು ಆಸ್ಪತ್ರೆಗೆ ಕರೆತರಲಾಗಿತ್ತು.

ತೀವೃ ಉಸಿರಾಟದ ಸಮಸ್ಯೆಗೊಳಗಾಗಿ ನರಳುತ್ತಿದ್ದರೂ ಆಸ್ಪತ್ರೆಗೆ ಹೋಗುವಂತೆ ಭಕ್ತರು ಮಾಡಿದ ಒತ್ತಾಯವನ್ನು ಸ್ವಾಮೀಜಿ ನಿರಾಕರಿಸಿದ್ದರಿಂದ ಸಮಸ್ಯೆ ಉಲ್ಬಣಗೊಂಡಿತ್ತು ಎನ್ನಲಾಗಿದೆ. ಸಂಜೆ 4:55ರ ಸುಮಾರಿಗೆ ಸ್ವಾಮೀಜಿ ಮೃತಪಟ್ಟಿದ್ದಾರೆ. ಸ್ವಾಮೀಜಿ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದಲೂ ಬಳಲುತ್ತಿದ್ದರು.

Get real time updates directly on you device, subscribe now.