ಜೈಲಿನಲ್ಲಿರುವ ಕವಿ, ಹೋರಾಟಗಾರ ವರವರ ರಾವ್‌ಗೆ ಕೋವಿಡ್ ಸೋಂಕು

ವರವರ ರಾವ್ ಮಧ್ಯಂತರ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಶೇಷ ನ್ಯಾಯಾಲಯವೊಂದು ತಿರಸ್ಕರಿಸಿದೆ.

ವರವರ ರಾವ್ ಅವರಿಗೆ ಸೋಂಕಿನ ಲಕ್ಷಣಗಳು, ಉಸಿರಾಟದ ಸಮಸ್ಯೆ ಇಲ್ಲ. ಅವರನ್ನು ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗುವುದು.

ಕರಾವಳಿ ಕರ್ನಾಟಕ ವರದಿ
ಮುಂಬೈ: ಕಳೆದ ಎರಡು ವರ್ಷಗಳಿಂದ ಜೈಲಿನಲ್ಲಿರುವ ತೆಲುಗು ಕವಿ, ಸಾಹಿತಿ ಮತ್ತು ಹೋರಾಟಗಾರ ವರವರ ರಾವ್(80) ಅವರಿಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದೆ.

ತಾಲೋಜಾ ಸೆಂಟ್ರಲ್ ಜೈಲಿನಿಂದ ಜೆಜೆ ಆಸ್ಪತ್ರೆಗೆ ಅನಾರೋಗ್ಯದಿಂದ ಬಳಲುತ್ತಿದ್ದ ವರವರ ರಾವ್ ಅವರನ್ನು ಕರೆತಂದಾಗ ವೈದ್ಯರು ಕೊರೋನಾ ಪರೀಕ್ಷೆ ಮಾಡಿದ್ದು, ಪಾಸಿಟಿವ್ ಬಂದಿದೆ.

ವರವರ ರಾವ್ ಅವರಿಗೆ ಸೋಂಕಿನ ಲಕ್ಷಣಗಳು, ಉಸಿರಾಟದ ಸಮಸ್ಯೆ ಇಲ್ಲ. ಅವರನ್ನು ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗುವುದು ಎಂದು ಜೆಜೆ ಆಸ್ಪತ್ರೆ ಡೀನ್ ಡಾ. ರಂಜಿತ್ ಮಾಂಕೇಶ್ವರ್ ತಿಳಿಸಿದ್ದಾರೆ.

ವರವರ ರಾವ್ ಮಧ್ಯಂತರ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಶೇಷ ನ್ಯಾಯಾಲಯವೊಂದು ತಿರಸ್ಕರಿಸಿದೆ. ಈ ತೀರ್ಪು ವಿರೋಧಿಸಿ ಬಾಂಬೆ ಹೈಕೋರ್ಟಿಗೆ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆ ನಾಳೆ ನಡೆಯುವ ಸಾಧ್ಯತೆಯಿದೆ.

Get real time updates directly on you device, subscribe now.