ಕುಂದಾಪುರ: ಎ‌ಎಸ್ಸೈಗೆ ಕೋರೋನಾ ಸೋಂಕು, ಎಸ್ಸೈ ಸೇರಿದಂತೆ ನಾಲ್ವರು ಕ್ವಾರಂಟೈನ್

ಇಂದು ಪೊಲೀಸ್ ಠಾಣೆಯನ್ನು ಸ್ಯಾನಿಟೈಸ್ ಮಾಡಲಾಗುತ್ತಿದ್ದು, ನಾಳೆ ಎಂದಿನಂತೆ ಕಾರ್ಯಾಚರಿಸಲಿದೆ.

ಕರಾವಳಿ ಕರ್ನಾಟಕ ವರದಿ
ಕುಂದಾಪುರ: ಠಾಣೆಯ ಎ‌ಎಸ್‌ಐ ಓರ್ವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಅವರೊಡನೆ ಸಂಪರ್ಕಕ್ಕೆ ಬಂದ ಕುಂದಾಪುರ ಠಾಣಾಧಿಕಾರಿ ಹರೀಶ್ ಸೇರಿದಂತೆ ನಾಲ್ವರು ಪೊಲೀಸ್ ಸಿಬಂದಿಗಳು ಹೋಂಕ್ವಾರಂಟೈನ್‌ಗೆ ಒಳಗಾಗಲಿದ್ದಾರೆ.

ಕುಂದಾಪುರ ಠಾಣೆಯನ್ನು ಒಂದು ದಿನ ಸೀಲ್‌ಡೌನ್ ಮಾಡಿ ಸ್ಯಾನಿಟೈಸ್ ಮಾಡಲಾಗುವುದು ಎಂದು ಎ‌ಎಸ್‌ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.

 

Get real time updates directly on you device, subscribe now.