ಮಾಸ್ಕ್ ಧರಿಸುವಂತೆ ಜನರಿಗೆ ಹೇಳುವುದಿಲ್ಲ: ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಮಾಸ್ಕ್ ಧರಿಸುವುದು, ಬಿಡುವುದು ಜನರ ಸ್ವಾತಂತ್ರ್ಯ.

ಕರಾವಳಿ ಕರ್ನಾಟಕ ವರದಿ
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಖಗವಸು(ಮಾಸ್ಕ್) ಧರಿಸುವಂತೆ ಜನರಿಗೆ ಆದೇಶಿಸುವುದಿಲ್ಲ.  ಅದನ್ನು ಅವರ ಸ್ವಾತಂತ್ರಕ್ಕೆ ಬಿಟ್ಟುಬಿಡಬೇಕೆಂದು ಹೇಳಿರುವುದು ಹೊಸ ಚರ್ಚೆ ಹುಟ್ಟುಹಾಕಿದೆ.

ಮಾಸ್ಕ್ ಧರಿಸುವುದನ್ನು ಇಷ್ಟಪಡದ ಟ್ರಂಪ್ ಇತ್ತೀಚೆಗೆ ಒಮ್ಮೆ ಮಾಸ್ಕ್ ಧರಿಸಿ ಗಮನ ಸೆಳೆದಿದ್ದರು.

ಅಮೆರಿಕಾದ  ಪ್ರಮುಖ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಡಾ. ಅಂತೋನಿ ಫೌಸಿ ಜನಸಂದಣಿ ಇರುವ ಸ್ಥಳಗಳಲ್ಲಿ ಮಾಸ್ಕ್ ಧರಿಸುವ ಅಗತ್ಯವನ್ನು ರಾಜಕೀಯ ನಾಯಕರು  ಜನರಿಗೆ  ಮನದಟ್ಟು ಮಾಡಿಕೊಡಬೇಕೆಂದು  ಕರೆ ನೀಡಿದ್ದಾರೆ. ಆದರೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತ್ರ ಆ ಬಗ್ಗೆ ನಿರ್ಲಕ್ಷ ಧೋರಣೆ ಹೊಂದಿರುವುದು ಅವರ ನಡೆ-ನುಡಿಗಳಿಂದ ಜಗತ್ತಿಗೆ ತಿಳಿಯುತ್ತಿದೆ.

ಜನರು ಮಾಸ್ಕ್  ಧರಿಸಬೇಕೆಂಬ ನಿಬಂಧನೆಗೆ  ತಾವು  ವಿರುದ್ದವಾಗಿರುವುದಾಗಿ  ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಮಾಧ್ಯಮ ಸಂದರ್ಶನವೊಂದರಲ್ಲಿ  ಅಭಿಪ್ರಾಯ ವ್ಯಕ್ತಪಡಿಸಿದ್ದರು. ಮಾಸ್ಕ್  ಧರಿಸುವುದರಿಂದ ಸಂಪೂರ್ಣವಾಗಿ ವೈರಸ್ ನಿಯಂತ್ರಿಸಲು ಸಾಧ್ಯವಿಲ್ಲ ಎಂದು  ಅವರು ಅಭಿಪ್ರಾಯಪಟ್ಟಿದ್ದರು. ತಮ್ಮ ನಿಲುವು ಮಾಸ್ಕ್ ಧರಿಸುವುದರ ವಿರುದ್ಧವಾಗಿದ್ದರೂ ಪ್ರಸ್ತುತ  ದೇಶದಲ್ಲಿ ಆರ್ಥಿಕ ವ್ಯವಸ್ಥೆ  ಮತ್ತೆ  ಚೇತರಿಸಿಕೊಳ್ಳುತ್ತಿರುವ  ಹಿನ್ನಲೆಯಲ್ಲಿ  ಜನ ಸೇರುವ ಕಡೆ ಮಾಸ್ಕ್ ಧರಿಸಬೇಕೆಂದು  ಟ್ರಂಪ್  ಜನರಿಗೆ ಸೂಚಿಸಿದ್ದಾರೆ.

Get real time updates directly on you device, subscribe now.