ಉತ್ತರ ಕನ್ನಡ ಜಿಲ್ಲೆಯಲ್ಲಿ 69 ಕೊರೊನಾ ಪ್ರಕರಣ

ಕಳೆದ ಎರಡು ತಿಂಗಳುಗಳಿಂದ ಯಾವುದೇ ಸೋಂಕು ಇಲ್ಲದೇ ನೆಮ್ಮದಿಯಿಂದಿದ್ದ ಜೋಯಿಡಾ ತಾಲೂಕಿಗೂ ಕೋವಿಡ್-19.

ಕರಾವಳಿ ಕರ್ನಾಟಕ ವರದಿ/ರವಿತೇಜ ಕಾರವಾರ
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಒಟ್ಟೂ 69 ಕೊರೊನಾ ಪ್ರಕರಣಗಳು ದೃಢ ಪಟ್ಟಿದ್ದು ಕಳೆದ ಎರಡು ತಿಂಗಳುಗಳಿಂದ ಯಾವುದೇ ಸೋಂಕು ಇಲ್ಲದೇ ನೆಮ್ಮದಿಯಿಂದಿದ್ದ ಜೋಯಿಡಾ ತಾಲೂಕಿಗೂ ಕೋವಿಡ್-19 ಮತ್ತೆ ವಕ್ಕರಿಸಿದೆ.

ಕುಮಟಾದಲ್ಲಿ ಅತೀ ಹೆಚ್ಚು 17 ಪ್ರಕರಣ ದೃಢ ಪಟ್ಟರೆ, ಯಲ್ಲಾಪುರ 12, ಅಂಕೋಲಾ 10, ಮುಂಡಗೋಡ, ಭಟ್ಕಳ ಹಾಗೂ ಕಾರವಾರ ತಲಾ 6, ಹೊನ್ನಾವರ 4, ಸಿದ್ದಾಪುರ 3, ಜೋಯಿಡಾ ಹಾಗೂ ಶಿರಸಿ ತಲಾ 2 ಮತ್ತು ಹಳಿಯಾಳದಲ್ಲಿ ಒಂದು ಕೊರೊನಾ ಪ್ರಕರಣ ದೃಢ ಪಟ್ಟಿದೆ.

ಕುಮಟಾದ ಒಟ್ಟೂ 17 ಕೋವಿಡ್ ಪ್ರಕರಣಗಳಲ್ಲಿ ಸೋಂಕಿತರ ಸಂಪರ್ಕದಿಂದಾಗಿ 35ರ ಯುವಕ, 70ರ ವೃದ್ಧ, 11 ರ ಬಾಲಕ, 65ರ ವೃದ್ಧೆ, 45, 35ರ ಮಹಿಳೆಯರು, 9 ವರ್ಷದ ಬಾಲಕಿಯಲ್ಲಿ, ಪ್ರಯಾಣದ ಇತಿಹಾಸ ಉಳ್ಳ 44 ರ ಪುರುಷನಲ್ಲಿ ಸೋಂಕು ದೃಢಪಟ್ಟಿದೆ. ಇನ್ನು ಸೋಂಕು ದೃಢ ಪಟ್ಟ 29, 64, 37, 38ರ ಮಹಿಳೆಯರ, 62, 56, 50ರ ಪುರುಷರ, 10 ಮತ್ತ 14ರ ಬಾಲಕರು ಸೇರಿ 9 ಮಂದಿಯ ಸೋಂಕಿನ ಮೂಲ ಪತ್ತೆಯಾಗದಿರುವುದು ಆತಂಕ ಸೃಷ್ಟಿಸಿದೆ.

ಯಲ್ಲಾಪುರದ 12 ಪ್ರಕರಣಗಳಲ್ಲಿ 33ರ ಯುವತಿ, 78ರ ವೃದ್ಧ, 39ರ ಪುರುಷ ಇವರಲ್ಲಿ ಐಎಲ್‌ಐ ಪ್ರಕರಣ ಹಾಗೂ 18ರ ಯುವತಿಯಲ್ಲಿ ಸಾರಿ ಪ್ರಕರಣದ ದೃಢ ಪಟ್ಟಿದೆ. ಇನ್ನು 63ರ ವೃದ್ಧೆ, 30, 45 ರ ಮಹಿಳೆಯರು, 14, 16ರ ಬಾಲಕಿಯರು, 6ರ ಬಾಲಕ, 25 ಹಾಗೂ 32ರ ಯುವಕರು ಸೇರಿ 8 ಮಂದಿಯಲ್ಲಿ ಕೋವಿಡ್-19 ದೃಢ ಪಟ್ಟಿದ್ದು ಸೋಂಕಿನ ಮೂಲ ಪತ್ತೆಯಾಗಿಲ್ಲ.

ಅಂಕೋಲಾದಲ್ಲಿ ಒಟ್ಟೂ 10 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು ಸೋಂಕಿತರ ಸಂಪರ್ಕದಿಂದಾಗಿ 36, 20, 40ರ ಮಹಿಳೆಯರು, 43, 45, 47 ರ ಪುರುಷರಲ್ಲಿ 16ರ ಬಾಲಕನಲ್ಲಿ ಕೊರೊನಾ ದೃಢ ಪಟ್ಟಿದೆ. ಇನ್ನು 34, 38ರ ಮಹಿಳೆಯರು ಹಾಗೂ 34ರ ಪುರುಷರಲ್ಲಿ ಸೋಂಕು ದೃಢ ಪಟ್ಟಿದ್ದು ಸೋಂಕಿನ ಮೂಲ ಪತ್ತೆಯಾಗಿಲ್ಲ.

ಮುಂಡಗೋಡದ 6 ಪ್ರಕರಣಗಳಲ್ಲಿ ಪ್ರಯಾಣದ ಇತಿಹಾಸವಿರುವ 18, 25, 30, 31ರ ಯುವಕರಲ್ಲಿ, ಸೋಂಕಿತರ ಸಂಪರ್ಕಕ್ಕೆ ಬಂದಿದ್ದ 45ರ ಪುರುಷ ಹಾಗೂ 40ರ ಮಹಿಳೆಯರಲ್ಲಿ ಕೋವೊಡ್-19 ದೃಡಪಟ್ಟಿದೆ.

ಭಟ್ಕಳದ ಒಟ್ಟೂ 6 ಪ್ರಕರಣಗಳಲ್ಲಿ 37ರ ಪುರುಷ, 24, 27, 30ರ ಮಹಿಳೆಯರಲ್ಲಿ ಕೋವಿಡ್ ದೃಢ ಪಟ್ಟಿದ್ದು ಇವರ ಸಂಪರ್ಕ ಪತ್ತೆಯಾಗಿಲ್ಲ. ಇನ್ನು 29ರ ಯುವಕ ಹಾಗೂ 49ರ ಪುರುಷನಲ್ಲಿ ಐಎಲ್‌ಐ ಪ್ರಕರಣ ದೃಢ ಪಟ್ಟಿದೆ.

ಕಾರವಾರದ 6 ಪ್ರಕರಣಗಳಲ್ಲಿ 40 ವರ್ಷದ ಪುರುಷನಲ್ಲಿ ಐಎಲ್‌ಐ ಪ್ರಕರಣ ದೃಢ ಪಟ್ಟಿದ್ದು ಉಳಿದಂತೆ ಸೋಂಕು ದೃಢ ಪಟ್ಟ 23, 24, 26ರ ಯುವಕರಲ್ಲಿ 15ರ ಬಾಲಕಿ ಹಾಗೂ 30ರ ಯುವತಿಯಲ್ಲಿ ಸೋಂಕಿನ ಮೂಲ ಪತ್ತೆಯಾಗಿಲ್ಲ.

ಹೊನ್ನಾವರದಲ್ಲಿ ಸಂಪರ್ಕ ಪತ್ತೆಯಾಗದೇ 30 ವರ್ಷದ ಪುರುಷನಲ್ಲಿ, ಪ್ರಯಾಣದ ಹಿನ್ನೆಲೆಯುಳ್ಳ 31, 32ರ ಯುವಕರಲ್ಲಿ ಹಾಗೂ ಸೋಂಕಿತರ ಸಂಪರ್ಕಕ್ಕೆ ಬಂದ 45ರ ಪುರುಷನಲ್ಲಿ ಸೇರಿ ಒಟ್ಟೂ 4 ಮಂದಿಯಲ್ಲಿ ಕೊರೊನಾ ಸೋಂಕು ದೃಢ ಪಟ್ಟಿದೆ.

ಸಿದ್ದಾಪುರದ 27, 28ರ ಯುವಕರು ಹಾಗೂ 71ರ ವೃದ್ಧನಲ್ಲಿ ಕೊರೊನಾ ಸೋಂಕು ಇರುವುದು ದೃಢ ಪಟ್ಟಿದ್ದು ಈ ಎಲ್ಲಾ ಮೂವರ ಸೋಂಕಿನ ಮೂಲ ಇನ್ನೂ ಪತ್ತೆಯಾಗಿಲ್ಲ.

ಉಳಿದಂತೆ ಜೋಯಿಡಾದ 60ರ ವೃದ್ಧ, 5ರ ಬಾಲಕ, ಶಿರಸಿಯ30, 33ರ ಯುವತಿಯರು ಹಾಗೂ ಹಳಿಯಾಳದ 33ರ ಪುರುಷ ಇವರಲ್ಲಿ ಕೊರೊನಾ ಸೋಂಕು ದೃಢ ಪಟ್ಟಿದ್ದು ಸಂಪರ್ಕ ಪತ್ತೆಯಾಗಿಲ್ಲ.

99 ಸೋಂಕಿತರು ಗುಣಮುಖ

ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಕೊರೊನಾದೊಂದಿಗೆ ಹೋರಾಡಿ ಗೆದ್ದು ಗುಣಮುಖರಾದ ಒಟ್ಟೂ 99 ಮಂದಿಯನ್ನು ಬಿಡುಗಡೆ ಮಾಡಲಾಗಿದೆ. ಭಟ್ಕಳದಲ್ಲಿ 75, ಹಳಿಯಾಳದಲ್ಲಿ 2, ಕುಮಟಾ 4, ಸಿದ್ದಾಪುರ 1, ಶಿರಸಿಯಲ್ಲಿ 17 ಮಂದಿಯನ್ನು ಬಿಡುಗಡೆ ಮಾಡಲಾಗಿದೆ.

ಒಟ್ಟು ಸೋಂಕಿತರು 1085: ಸಕ್ರಿಯ ಪ್ರಕರಣಗಳು 630

ರವಿವಾರ ದೃಢಪಟ್ಟ 69 ಕೊರೊನಾ ಪ್ರಕರಣಗಳೊಂದಿಗೆ ಜಿಲ್ಲೆಯ ಒಟ್ಟೂ ಸೋಂಕಿತರ ಸಂಖ್ಯೆ 1085 ಕ್ಕೆ ಏರಿದೆ. ಅಂಕೋಲಾದಲ್ಲಿ 49, ಭಟ್ಕಳ 281, ಹಳಿಯಾಳ 177, ಹೊನ್ನಾವರ 90, ಜೊಯಿಡಾ 8, ಕಾರವಾರ 86, ಕುಮಟಾ 142, ಮುಂಡಗೋಡ 66, ಸಿದ್ದಾಪುರ 21, ಶಿರಸಿ 90,ಯಲ್ಲಾಪುರದಲ್ಲಿ 75 ಪ್ರಕರಣಗಳು ಇದುವರೆಗೆ ದೃಢ ಪಟ್ಟಿವೆ.

ಇವರಲ್ಲಿ ಈಗಾಗಲೇ ಅಂಕೋಲಾದಲ್ಲಿ 14, ಭಟ್ಕಳ 207, ಹಳಿಯಾಳ 31, ಹೊನ್ನಾವರ 35, ಜೊಯಿಡಾ 6, ಕಾರವಾರ 24, ಕುಮಟಾ 36, ಮುಂಡಗೋಡ 18, ಸಿದ್ದಾಪುರ 7, ಶಿರಸಿ 35, ಯಲ್ಲಾಪುರದಲ್ಲಿ 32 ಮಂದಿ ಸೇರಿ ಒಟ್ಟೂ 445 ಮಂದಿ ಬಿಡುಗಡೆಯಾಗಿದ್ದಾರೆ.

ಅಂಕೋಲಾದಲ್ಲಿ 34, ಭಟ್ಕಳ 70, ಹಳಿಯಾಳ 145, ಹೊನ್ನಾವರ 55, ಜೊಯಿಡಾ 2, ಕಾರವಾರ 60, ಕುಮಟಾ 106, ಮುಂಡಗೋಡ 48, ಸಿದ್ದಾಪುರ 14, ಶಿರಸಿ 54, ಯಲ್ಲಾಪುರದಲ್ಲಿ 42 ಮಂದಿ ಸೇರಿ ಒಟ್ಟೂ 630 ಸಕ್ರಿಯ ಪ್ರಕರಣಗಳಿದ್ದು ಎಲ್ಲರೂ ಆಯಾ ತಾಲೂಕಿನ ಕೋವಿಡ್ ವಾರ್ಡ್ಗಳಲ್ಲಿ ಹಾಗೂ ರೋಗ ಲಕ್ಷಣ ಇರುವ ಸೋಂಕಿತರು ಕಾರವಾರದ ಕಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಜಿಲ್ಲೆಯಲ್ಲಿ ಇದುವರೆಗೆ ಅಂಕೋಲಾದಲ್ಲಿ 1, ಭಟ್ಕಳ 4, ಹಳಿಯಾಳ 1, ಕಾರವಾರ 2, ಶಿರಸಿ 1 ಹಾಗೂ ಯಲ್ಲಾಪುರ 1 ಸೇರಿ ಒಟ್ಟೂ 10 ಮಂದಿ ಕೊರೊನಾದಿಂದಾಗಿ ಮೃತಪಟ್ಟಿದ್ದಾರೆ.

Get real time updates directly on you device, subscribe now.