ಪುತ್ರಿಯರ ಎದುರೇ ಗುಂಡೇಟಿಗೆ ತುತ್ತಾಗಿದ್ದ ಪತ್ರಕರ್ತ ಮೃತ್ಯು

ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ಪೊಲೀಸರು ಈ ಪ್ರಕರಣದಲ್ಲಿ ಒಂಬತ್ತು ಆರೋಪಿಗಳನ್ನು ಬಂಧಿಸಿದ್ದಾರೆ.

ವಿಕ್ರಂ ಜೋಶಿ ಅವರು ಮನೆ ಸಮೀಪ ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದಾಗ ಗುಂಪೊಂದು ಅವರನ್ನು ಅಡ್ಡಗಟ್ಟಿ ಹಲ್ಲೆಗೈದ ಬಳಿಕ ತಲೆಗೆ ಗುಂಡಿಕ್ಕಿತ್ತು.

ಕರಾವಳಿ ಕರ್ನಾಟಕ ವರದಿ
ಫೌಝಿಯಾಬಾದ್: ಪುತ್ರಿಯರ ಜೊತೆ ಬೈಕ್‌ನಲ್ಲಿ ಬರುತ್ತಿದ್ದ ಸಂದರ್ಭ ದುಷ್ಕರ್ಮಿಗಳ ಗುಂಡಿನ ದಾಳಿಯಿಂದ ಗಂಭೀರ ಗಾಯಗೊಂಡಿದ್ದ ಉತ್ತರಪ್ರದೇಶದ ಪತ್ರಕರ್ತ ವಿಕ್ರಂ ಜೋಶಿ ಇಂದು ಮೃತಪಟ್ಟಿದ್ದಾರೆ.

ವಿಕ್ರಂ ಜೋಶಿ ಅವರು ತನ್ನ ಮನೆ ಸಮೀಪ ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದಾಗ ಗುಂಪೊಂದು ಅವರನ್ನು ಅಡ್ಡಗಟ್ಟಿ ಹಲ್ಲೆಗೈದ ಬಳಿಕ ತಲೆಗೆ ಗುಂಡಿಕ್ಕಿತ್ತು. ಸೊಸೆಗೆ ಕಿರುಕುಳ ನೀಡಲಾಗುತ್ತಿದೆ ಎಂದು ಜೋಶಿಯವರು ವಿಜಯ ನಗರ ಪೊಲೀಸರಿಗೆ ದೂರು ನೀಡಿದ ನಾಲ್ಕೇ ದಿನಗಳಲ್ಲಿ ಅವರನ್ನು ಹತ್ಯೆಗೈಯಲಾಗಿದೆ ಎಂದು ಅವರ ಸಹೋದರ ತಿಳಿಸಿದ್ದಾರೆ.

ವಿಕ್ರಂ ಅವರಿಗೆ ಗುಂಡಿಕ್ಕಲಾದ ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ಪೊಲೀಸರು ಈ ಪ್ರಕರಣದಲ್ಲಿ ಒಂಬತ್ತು ಆರೋಪಿಗಳನ್ನು ಬಂಧಿಸಿದ್ದಾರೆ.

Get real time updates directly on you device, subscribe now.