ಉತ್ತರ ಕನ್ನಡ: ಎರಡನೇ ಬಾರಿ ಶತಕ ಬಾರಿಸಿದ ಕೊರೊನಾ

ಒಂದೇ ದಿನ 109 ಮಂದಿಯಲ್ಲಿ ಸೋಂಕು ಪತ್ತೆ: 1272ಕ್ಕೇರಿದ ಸೋಂಕಿತರ ಸಂಖ್ಯೆ.

ಗುಣಮುಖರಾದ 35 ಮಂದಿ ಬಿಡುಗಡೆ.

ಕರಾವಳಿ ಕರ್ನಾಟಕ ವರದಿ/ರವಿತೇಜ ಕಾರವಾರ
ಕಾರವಾರ: ಜಿಲ್ಲೆಯಲ್ಲಿ ಎರಡನೇ ಬಾರಿ ಕೊರೊನಾ ಶತಕ ಬಾರಿಸಿದ್ದು ಮಂಗಳವಾರ ಒಟ್ಟೂ 109 ಕೋವಿಡ್-19 ಪ್ರಕರಣಗಳು ದೃಢ ಪಟ್ಟಿವೆ.

ಹಳಿಯಾಳ ತಾಲೂಕಿನಲ್ಲಿ ಅತೀ ಹೆಚ್ಚು 44 ಪ್ರಕರಣಗಳು, ಶಿರಸಿ 22, ಹೊನ್ನಾವರ 13, ಕಾರವಾರ 8, ಕುಮಟಾ 7, ಮಂಡಗೋಡ 6, ಭಟ್ಕಳ 5, ಜೋಯಿಡಾ 2, ಸಿದ್ದಾಪುರ ಹಾಗೂ ಯಲ್ಲಾಪುರಗಳಲ್ಲಿ ತಲಾ ಒಂದು ಪ್ರಕರಣಗಳು ದೃಢ ಪಟ್ಟಿವೆ. ಇವುಗಳಲ್ಲಿ 62 ಪ್ರಕರಣಗಳಲ್ಲಿ ಸೋಂಕಿನ ಮೂಲವೇ ಪತ್ತೆಯಾಗದಿರುವುದನ್ನು ಗಮನಿಸಿದಾಗ ಕೊರೊನಾ ವೈರಸ್ ಸಮುದಾಯದಲ್ಲಿ ಹರಡಿರುವ ಆತಂಕ ವ್ಯಕ್ತವಾಗಿದೆ.

ಹಳಿಯಾಳದಲ್ಲಿ ದೃಢಪಟ್ಟ 44 ಪ್ರಕರಣಗಳಲ್ಲಿ ಅಂತಾರಾಷ್ಟ್ರೀಯ ಪ್ರಯಾಣದ ಇತಿಹಾಸವುಳ್ಳ 1 ವರ್ಷದ ಬಾಲಕಿಯಲ್ಲಿ, ಸೋಂಕಿತರ ಸಂಪರ್ಕಕ್ಕೆ ಬಂದ 43, 49ರ ಮಹಿಳೆಯರಲ್ಲಿ, 31, 24, 45, 32, 38, 27, 43, 38, 39, 31, 54ರ ಪುರುಷರಲ್ಲಿ ಸೋಂಕು ದೃಢ ಪಟ್ಟರೆ 40ರ ಪುರುಷನಲ್ಲಿ ಐಎಲ್‌ಐ ಪ್ರಕರಣ ದೃಢ ಪಟ್ಟಿದೆ. ಇನ್ನು 10, 4ರ ಬಾಲಕಿಯರಲ್ಲಿ, 36, 18, 25, 46, 85ರ ಮಹಿಳೆಯರಲ್ಲಿ, 32, 33, 72, 33, 30, 32, 34, 32, 24, 26, 22, 20, 39, 45, 33, 28, 43, 21, 23ರ ವ್ಯಕ್ತಿಗಳಲ್ಲಿ, 16, 2, 13ರ ಬಾಲಕರು ಸೇರಿ ಒಟ್ಟೂ 29 ಮಂದಿಯಲ್ಲಿ ಕೋವಿಡ್ ಸೋಂಕು ದೃಢ ಪಟ್ಟಿದ್ದು ಇವರ ಸಂಪರ್ಕವೇ ಇನ್ನು ಪತ್ತೆಯಾಗದಿರುವುದು ಆತಂಕಕ್ಕೆ ಕಾರಣವಾಗಿದೆ.

ಶಿರಸಿಯ ಒಟ್ಟೂ 22 ಪ್ರಕರಣಗಳಲ್ಲಿ 40, 60, 40, 45, 40, 20, 62, 34, 24ರ ಮಹಿಳೆಯರಲ್ಲಿ, 14, 16, 11, 16ರ ಬಾಲಕಿಯರಲ್ಲಿ, 30, 45ರ ಪುರುಷರಲ್ಲಿ, 9ರ ಬಾಲಕನಲ್ಲಿ ಸೋಂಕಿತರ ಸಂಪರ್ಕದಿAದ ಕೊರೊನಾ ದೃಢಪಟ್ಟಿದೆ. ಇನ್ನು 56, 26ರ ಮಹಿಳೆಯರು, 52, 76, 55, 33ರ ಪುರುಷರಲ್ಲಿ ಸೋಂಕು ಪತ್ತೆಯಾಗಿದ್ದು ಈ 6 ಮಂದಿಯಲ್ಲಿ ಸೋಮಕಿನ ಮೂಲವೇ ಪತ್ತೆಯಾಗಿಲ್ಲ.

ಹೊನ್ನಾವರದ 13 ಪ್ರಕರಣಗಳಲ್ಲಿ ಸೋಂಕಿತರ ಸಂಪರ್ಕದಿಂದಾಗಿ 16ರ ಬಾಲಕಿ ಹಾಗೂ 67ರ ವೃದ್ಧರಲ್ಲಿ ಸೋಂಕು ದೃಢ ಪಟ್ಟಿದ್ದು, 35 ವರ್ಷದ ಯುವಕನಲ್ಲಿ ಐಎಲ್‌ಐ ಪ್ರಕರಣ ಪತ್ತೆಯಾಗಿದೆ. ಇನ್ನು 6, 9, 3ರ ಬಾಲಕಿಯರು, 17, 14ರ ಬಾಲಕರು, 32, 30ರ ಯುವಕರು 35, 47, 45ರ ಮಹಿಳೆಯರಲ್ಲಿ ಸೋಂಕಿನ ಮೂಲವೇ ಪತ್ತೆಯಾಗಿಲ್ಲ.

ಕಾರವಾರದ 46, 30, 43, 39, 42ರ ಪುರುಷರು, 6ರ ಬಾಲಕಿ, 58, 32ರ ಮಹಿಳೆ ಸೇರಿ ಒಟ್ಟೂ 8 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು ಇವರಲ್ಲಿ ಯಾರೊಬ್ಬರ ಸೋಂಕಿನ ಮೂಲವೂ ಪತ್ತೆಯಾಗಿಲ್ಲ. ಹೀಗಾಗಿ ಕಾರವಾರದಲ್ಲಿ ಆತಂಕ ಇನ್ನಷ್ಟು ಹೆಚ್ಚಾಗಿದೆ.

ಕುಮಟಾದಲ್ಲಿ 7 ಪ್ರಕರಣಗಳು ದೃಢ ಪಟ್ಟಿದ್ದು ಎಲ್ಲವೂ ಸೋಂಕಿತರ ಸಂಪರ್ಕದಿಂದಾಗಿ ತಗುಲಿರುವುದಾಗಿದೆ. 6, 10ರ ಬಾಲಕರು, 15ರ ಬಾಲಕಿ, 23, 55ರ ಪುರುಷರು, 45, 21ರ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿತ್ತು.

ಮುಂಡಗೋಡದಲ್ಲಿ 6 ಪ್ರಕರಣಗಳು ದೃಢಪಟ್ಟಿದ್ದು 1 ವರ್ಷದ ಬಾಲಕ, 14ರ ಬಾಲಕಿ, 49, 55ರ ಮಹಿಳೆಯರಲ್ಲಿ ಸೋಂಕಿತರ ಸಂಪರ್ಕದಿAದಾಗಿ ಸೋಂಕು ತಗುಲಿದ್ದು, 29ರ ಮಹಿಳೆ ಹಾಗೂ 15ರ ಬಾಲಕರಲ್ಲಿ ಸೋಂಕಿನ ಮೂಲ ಪತ್ತೆಯಾಗಿಲ್ಲ.

ಭಟ್ಕಳದ 5 ಪ್ರಕರಣಗಳಲ್ಲಿ 50, 22, 34ರ ವ್ಯಕ್ತಿಗಳು, 90ರ ವೃದ್ಧೆಯಲ್ಲಿ ಸೋಂಕು ಪತ್ತೆಯಾಗಿದ್ದು ಸಂಪರ್ಕ ಪತ್ತೆಯಾಗಿಲ್ಲ. ಇನ್ನು ಮೃತ ಪಟ್ಟಿದ್ದ 65 ವರ್ಷದ ಮಹಿಳೆಯಲ್ಲಿ ಸೋಂಕು ದೃಢ ಪಟ್ಟಿದೆ.

ಜೋಯಿಡಾದಲ್ಲಿ 26, 37 ರ ಇಬ್ಬರು ವ್ಯಕ್ತಿಗಳಲ್ಲಿ ಕೊರೊನಾ ಸೋಂಕು ದೃಢ ಪಟ್ಟಿದ್ದು ಸಂಪರ್ಕ ಪತ್ತೆಯಾಗಿಲ್ಲ.

ಸಿದ್ದಾಪುರ ಸೋಂಕಿತರ ಸಂಪರ್ಕದಿಂದಾಗಿ 14 ವರ್ಷದ ಬಾಲಕನಲ್ಲಿ ಕೊರೊನಾ ದೃಢ ಪಟ್ಟಿದ್ದು ಯಲ್ಲಾಪುರದಲ್ಲಿ 23 ವರ್ಷದ ಯುವಕನಲ್ಲಿ ಸೋಂಕು ಪತ್ತೆಯಾಗಿದ್ದು ಸೋಂಕಿನ ಮೂಲ ಪತ್ತೆಯಾಗಿಲ್ಲ.

ಗುಣಮುಖರಾದ 35 ಮಂದಿ ಬಿಡುಗಡೆ:

ಕೊರೊನಾ ಸೋಂಕು ತಗುಲಿ ಕೋವಿಡ್ ವಾರ್ಡ್ಗೆ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖರಾದ ವಿವಿಧ ತಾಲೂಕುಗಳ ಒಟ್ಟೂ 40 ಮಂದಿಯನ್ನು ಮಂಗಳವಾರ ಬಿಡುಗಡೆಗೊಳಿಸಲಾಗಿದೆ.

ಅಂಕೋಲಾ 5, ಭಟ್ಕಳ 21, ಹೊನ್ನಾವರ 5, ಕಾರವಾರ 2, ಕುಮಟಾ 2 ಇವರೆಲ್ಲರ ವರದಿ ಕೊರೊನಾ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಎಲ್ಲರನ್ನು ಆಯಾ ತಾಲೂಕಾ ಕೋವಿಡ್ ವಾರ್ಡ್ಗಳಿಂದ ಬಿಡುಗಡೆಗೊಳಿಸಲಾಯಿತು.

520 ಗುಣಮುಖ: 742 ಸಕ್ರಿಯ: 10 ಸಾವು

ಮಂಗಳವಾರ ದೃಢಪಟ್ಟ 109 ಕೊರೊನಾ ಪ್ರಕರಣಗಳೊಂದಿಗೆ ಜಿಲ್ಲೆಯ ಒಟ್ಟೂ ಸೋಂಕಿತರ ಸಂಖ್ಯೆ 1272 ಕ್ಕೆ ಏರಿದೆ. ಅಂಕೋಲಾದಲ್ಲಿ 65, ಭಟ್ಕಳ 299, ಹಳಿಯಾಳ 260, ಹೊನ್ನಾವರ 103, ಜೊಯಿಡಾ 10, ಕಾರವಾರ 95, ಕುಮಟಾ 157, ಮುಂಡಗೋಡ 73, ಸಿದ್ದಾಪುರ 22, ಶಿರಸಿ 112,ಯಲ್ಲಾಪುರದಲ್ಲಿ 76 ಪ್ರಕರಣಗಳು ಇದುವರೆಗೆ ದೃಢ ಪಟ್ಟಿವೆ.

ಇವರಲ್ಲಿ ಈಗಾಗಲೇ ಅಂಕೋಲಾದಲ್ಲಿ 19, ಭಟ್ಕಳ 228, ಹಳಿಯಾಳ 31, ಹೊನ್ನಾವರ 41, ಜೊಯಿಡಾ 6, ಕಾರವಾರ 31, ಕುಮಟಾ 57, ಮುಂಡಗೋಡ 32, ಸಿದ್ದಾಪುರ 7, ಶಿರಸಿ 36, ಯಲ್ಲಾಪುರದಲ್ಲಿ 32 ಮಂದಿ ಸೇರಿ ಒಟ್ಟೂ 520 ಮಂದಿ ಬಿಡುಗಡೆಯಾಗಿದ್ದಾರೆ. ಅಂಕೋಲಾದಲ್ಲಿ 45, ಭಟ್ಕಳ 67, ಹಳಿಯಾಳ 228, ಹೊನ್ನಾವರ 62, ಜೊಯಿಡಾ 4, ಕಾರವಾರ 62, ಕುಮಟಾ 100, ಮುಂಡಗೋಡ 41, ಸಿದ್ದಾಪುರ 15, ಶಿರಸಿ 75, ಯಲ್ಲಾಪುರದಲ್ಲಿ 43 ಮಂದಿ ಸೇರಿ ಒಟ್ಟೂ 742 ಸಕ್ರಿಯ ಪ್ರಕರಣಗಳಿದ್ದು ಎಲ್ಲರೂ ಆಯಾ ತಾಲೂಕಿನ ಕೋವಿಡ್ ವಾರ್ಡ್ಗಳಲ್ಲಿ ಹಾಗೂ ರೋಗ ಲಕ್ಷಣ ಇರುವ ಸೋಂಕಿತರು ಕಾರವಾರದ ಕಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಜಿಲ್ಲೆಯಲ್ಲಿ ಇದುವರೆಗೆ ಅಂಕೋಲಾದಲ್ಲಿ 1, ಭಟ್ಕಳ 4, ಹಳಿಯಾಳ 1, ಕಾರವಾರ 2, ಶಿರಸಿ 1 ಹಾಗೂ ಯಲ್ಲಾಪುರ 1 ಸೇರಿ ಒಟ್ಟೂ 10 ಮಂದಿ ಕೊರೊನಾದಿಂದಾಗಿ ಮೃತಪಟ್ಟಿರುವ ಬಗ್ಗೆ ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್‌ನಲ್ಲಿ ತಿಳಿಸಲಾಗಿದೆ.

 

 

 

Get real time updates directly on you device, subscribe now.