ಹೊನ್ನಾವರ ಪೊಲೀಸ್ ಕಾರ್ಯಾಚರಣೆ: ಹೆದ್ದಾರಿಯಲ್ಲಿ ದರೋಡೆಗೆ ಹೊಂಚು ಹಾಕಿದ್ದವರ ಬಂಧನ

ಕರಾವಳಿ ಕರ್ನಾಟಕ ವರದಿ/ರವಿತೇಜ ಕಾರವಾರ
ಹೊನ್ನಾವರ:  ತಾಲೂಕಿನ ಮಂಕಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿಯ ವೇಳೆ ವಾಹನಗಳನ್ನು ತಡೆದು ದರೋಡೆ ನಡೆಸಲು ಸ್ಕೆಚ್ ರೂಪಿಸಿದ್ದ ನಾಲ್ವರು ದರೋಡೆಕೋರರನ್ನು ಹೊನ್ನಾವರ ಪೊಲೀಸರು ದಾಳಿ ನಡೆಸಿ ಬಂಧಿಸಿದು ಈ ವೇಳೆ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.

ಬಂಧಿತರನ್ನು ಹಬಿಬ್‌ವುಲ್ಲಾ, ಅಬ್ದುಲ್ ರಶೀದ್, ಅಬ್ದುಲ್ ಸಲಾಂ ಬ್ಯಾರಿ, ತನ್ವೀರ್ ಎಂದು ಗುರುತಿಸಲಾಗಿದ್ದು ಇನ್ನಿಬ್ಬರು ಆರೋಪಿಗಳಾದ ಫಯಾಜ್ ಹಾಗೂ ಸಜ್ಜದ್ ಪರಾರಿಯಾಗಿದ್ದು ಇವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಈ ಎಲ್ಲ ದರೋಡೆಕೋರರು ಮಂಕಿಯ ಬಳಿ ತಡರಾತ್ರಿ ವಾಹನಗಳನ್ನು ತಡೆದು ದರೋಡೆ ನಡೆಸಲು ಹೊಂಚು ಹಾಕಿ ನಿಂತಿರುವ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಬಂಧಿತರಿAದ ದರೋಡೆಗೆ ಬಳಸಲು ತಂದಿದ್ದ ಕಲ್ಲುಗಳು, ನೈಫ್, ದೊಣ್ಣೆ, ಖಾರದ ಪುಡಿ ಹಾಗೂ ಅವರು ತಂದಿದ್ದ ಕಾರನ್ನು ಜಪ್ತಿ ಪಡಿಸಿಕೊಂಡಿದ್ದಾರೆ.

ಈ ಕುರಿತು ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

Get real time updates directly on you device, subscribe now.