ಬೆಳ್ತಂಗಡಿ ಶಾಸಕ ನಡೆಸಿದ ಪೊಲೀಸ್ ಸಭೆಯಲ್ಲಿ ಸಂಘ ಪರಿವಾರ ಮುಖಂಡರ ದರ್ಬಾರ್?

ಕೆಲವರ ಮೇಲೆ ಹಿಂದೆ ಜಾನುವಾರು ಸಾಗಾಟಗಾರರಿಗೆ ಅಕ್ರಮ ಗೋಸಾಗಾಟ ನೆಪದಲ್ಲಿ ಹಲ್ಲೆಗೈದ ಪ್ರಕರಣಗಳೂ ಇವೆ ಎನ್ನಲಾಗಿದೆ.

ಕರಾವಳಿ ಕರ್ನಾಟಕ ವರದಿ
ಬೆಳ್ತಂಗಡಿ: ದನ ಕಳ್ಳತನ, ಅಕ್ರಮ ಗೋಸಾಗಾಟ ತಡೆಯುವ ಬಗ್ಗೆ ಶಾಸಕ ಹರೀಶ್ ಪೂಂಜಾ ನಡೆಸಿದ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಸಂಘ ಪರಿವಾರ ಮುಖಂಡರು ಭಾಗವಹಿಸಿ ಪೊಲೀಸರಿಗೆ ಸಲಹೆ ನೀಡಿದ್ದಾರೆ ಎಂಬ ಸಂಗತಿ ವಿವಾದಕ್ಕೆ ಕಾರಣವಾಗಿದೆ.

ಜಾನುವಾರು ವ್ಯಾಪಾರಿಗಳಿಗೆ  ಗೋ ಸಾಗಾಟ ಸಂದರ್ಭ ಹಲ್ಲೆಗೈದ ಆರೋಪ ಹೊಂದಿರುವ ವ್ಯಕ್ತಿಗಳು ಜು.28ರಂದು ಬೆಳ್ತಂಗಡಿ ಐಬಿಯಲ್ಲಿ ನಡೆದ ಈ ಸಭೆಯಲ್ಲಿ ಭಾಗವಹಿಸಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಪೊಲೀಸ್ ಜೊತೆಗಿನ ಸಭೆಯಲ್ಲಿ ಇಂಥ ವ್ಯಕ್ತಿಗಳು ಪಾಲ್ಗೊಂಡರೆ ಇನ್ನು ಮುಂದೆಯೂ ಇಂಥ ಹಲ್ಲೆ ನಡೆಸಲು ಕಾರಣವಾಗಬಹುದು ಎಂಬುದೇ ಜನರ ಆತಂಕಕ್ಕೆ ಕಾರಣ.

ಬೆಳ್ತಂಗಡಿ, ಧರ್ಮಸ್ಥಳ, ಪೂಂಜಾಲಕಟ್ಟೆ, ವೇಣೂರು ಎಸ್ಸೈ ಹಾಗೂ ಸಂಚಾರ ಠಾಣೆಯ ಪೊಲೀಸರು ಈ ಸಭೆಯಲ್ಲಿದ್ದು, ಇಲ್ಲಿ ವಿಎಚ್‌ಪಿ ಮತ್ತು ಬಜರಂಗದಳ ಮುಖಂಡರೂ ಪಾಲ್ಗೊಂಡಿದ್ದರು. ಕೆಲವರ ಮೇಲೆ ಹಿಂದೆ ಜಾನುವಾರು ಸಾಗಾಟಗಾರರಿಗೆ ಅಕ್ರಮ ಗೋಸಾಗಾಟ ನೆಪದಲ್ಲಿ ಹಲ್ಲೆಗೈದ ಪ್ರಕರಣಗಳೂ ಇವೆ ಎನ್ನಲಾಗಿದೆ.

Get real time updates directly on you device, subscribe now.