ರಾಜಸ್ಥಾನ: ಅಧಿವೇಶನ ನಡೆಸಲು ರಾಜ್ಯಪಾಲರ ಅನುಮತಿ

ಅಧಿವೇಶನ ನಡೆಸಲು ಅನುಮತಿ ಕೋರಿ ಕಳಿಸಿದ್ದ ಮೂರನೇ ಪ್ರಸ್ತಾವನೆಯನ್ನೂ ರಾಜ್ಯಪಾಲರು ತಿರಸ್ಕರಿಸಿದ್ದರು.

ರಾಜ್ಯಪಾಲರ ನಿರಾಕರಣೆಯನ್ನು ‘ಪ್ರೇಮ್ ಪತ್ರ’ ಎಂದು ಹಾಸ್ಯ ಮಾಡಿದ್ದ ಸಿಎಂ.

ಕರಾವಳಿ ಕರ್ನಾಟಕ ವರದಿ
ಜೈಪುರ: ರಾಜಸ್ಥಾನ ರಾಜ್ಯಪಾಲ ಕಲ್‌ರಾಜ್ ಮಿಶ್ರ ಅವರು ಆಗಸ್ಟ್ 14ರಿಂದ ವಿಧಾನಸಭೆಯ ಅಧಿವೇಶನ ನಡೆಸಲು ಕೊನೆಗೂ ಅನುಮತಿ ನೀಡುವುದರೊಂದಿಗೆ ರಾಜ್ಯದ ರಾಜಕೀಯ ಬಿಕ್ಕಟ್ಟು ತಾತ್ಕಾಲಿಕ ಶಮನಗೊಂಡಂತಾಗಿದೆ.

ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಅಧಿವೇಶನ ನಡೆಸಲು ಅನುಮತಿ ಕೋರಿ ಕಳಿಸಿದ್ದ ಮೂರನೇ ಪ್ರಸ್ತಾವನೆಯನ್ನೂ ರಾಜ್ಯಪಾಲರು ತಿರಸ್ಕರಿಸಿದ್ದರು. ಈ ನಿರಾಕರಣೆಯನ್ನು ‘ಪ್ರೇಮ್ ಪತ್ರ’ ಎಂದು ಹಾಸ್ಯ ಮಾಡಿದ್ದ ಸಿಎಂ ಅವರು ನಾನೇ ರಾಜ್ಯಪಾಲರನ್ನು ಭೇಟಿ ಮಾಡಿ ಅವರು ಏನು ಬಯಸುತ್ತಾರೆ ಎಂದು ಕೇಳುತ್ತೇನೆ ಎಂದಿದ್ದರು.

ಸಿಎಂ ಅಶೋಕ್ ಹೆಹ್ಲೋಟ್ ಅವರು ಬುಧವಾರ ರಾಜ್ಯಪಾಲರನ್ನು ಭೇಟಿ ಮಾಡಿದ ಬಳಿಕ ಕೊನೆಗೂ ಅನುಮತಿ ನೀಡಿದ್ದಾರೆ.

Get real time updates directly on you device, subscribe now.