ಕಾರು-ಸ್ಕೂಟರ್ ಡಿಕ್ಕಿ, ಮಲ್ಪೆ ಯುವಕ ಮೃತ್ಯು

ಕರಾವಳಿ ಕರ್ನಾಟಕ ವರದಿ
ಬ್ರಹ್ಮಾವರ: ಕೆ.ಜಿ.ರೋಡ್‌ನಲ್ಲಿ ಕಾರು ಸ್ಕೂಟರ್‌ಗೆ ಗುದ್ದಿದಾಗ ಯುವಕನೋರ್ವ ಮೃತಪಟ್ಟ ಘಟನೆ ವರದಿಯಾಗಿದೆ. ಶುಕ್ರವಾರ ರಾತ್ರಿ ಅಪಘಾತ ಸಂಭವಿಸಿದ್ದು, ಮೃತರನ್ನು ಕೊಡವೂರು ಮಲ್ಪೆ ಪರಿಸರದ ಪ್ರವೀಣ್ ಗಾಣಿಗ(24) ಎಂದು ಗುರುತಿಸಲಾಗಿದೆ.

ಪ್ರವೀಣ್ ಅವರು ಮಾವಿನಕುದ್ರು ಕಡೆ ತೆರಳಲು ಯು ಟರ್ನ್‌ನಲ್ಲಿದ್ದ ಸಂದರ್ಭ ಕೊಡವೂರಿನಿಂದ ಆರೂರಿನತ್ತ ತೆರಳುತ್ತಿದ್ದ ಬಲೆನೊ ಕಾರು ಡಿಕ್ಕಿ ಹೊಡೆದಿತ್ತು. ರಸ್ತೆಗೆ ಅಪ್ಪಳಿಸಲ್ಪಟ್ಟ ಪ್ರವೀಣ್ ಅವರ ತಲೆಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟಿದ್ದಾರೆ.

ಬ್ರಹ್ಮಾವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Get real time updates directly on you device, subscribe now.