ಕಾರವಾರ: ಮೀನುಗಾರಿಕೆ ಪುನರಾರಂಭ, ಸಮುದ್ರಕ್ಕಿಳಿದ ಕಡಲ ಮಕ್ಕಳು

ಇಂದು ಸೂರ್ಯ ಉದಯಿಸುವ ಮುನ್ನವೇ ನೂರಾರು ಬೋಟ್‌ಗಳು ಕಡಲಗಿಳಿದು ತಮ್ಮ ಮೊದಲ ಬೇಟೆ ಆರಂಭಿಸಿವೆ.

ಕೊರೊನಾ ಹರಡದಂತೆ ಮುಂಜಾಗೃತಾ ಕ್ರಮಗಳೊಂದಿಗೆ ಮೀನುಗಾರಿಕಾ ಬೋಟುಗಳು ಕಡಲಿಗಿಳಿದಿವೆ.

ಕರಾವಳಿ ಕರ್ನಾಟಕ ವರದಿ/ರವಿತೇಜ ಕಾರವಾರ
ಕಾರವಾರ: ಕೊರೋನಾ ಭೀತಿಯ ಮಧ್ಯೆಯೂ ಸಕಲ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಇಂದಿನಿಂದ ಯಾಂತ್ರೀಕೃತ ಮೀನುಗಾರಿಕೆಗೆ ಚಾಲನೆ ದೊರೆತಿದೆ. ಇಂದು ಸೂರ್ಯ ಉದಯಿಸುವ ಮುನ್ನವೇ ನೂರಾರು ಬೋಟ್‌ಗಳು ಕಡಲಗಿಳಿದು ತಮ್ಮ ಮೊದಲ ಬೇಟೆ ಆರಂಭಿಸಿವೆ.

ಪ್ರತಿವರ್ಷ ಮೀನುಗಳ ಸಂತಾನೋತ್ಪತ್ತಿ ಕಾಲವಾಗಿರುವ ಹಿನ್ನೆಲೆಯಲ್ಲಿ ಹಾಗೂ ಜೂನ್ 1ರಿಂದ ಜುಲೈ 31 ರವರೆಗೆ 2 ತಿಂಗಳುಗಳ ಕಾಲ ಮೀನುಗಾರಿಕೆ ನಿಷೇಧಿಸಿ ಸರಕಾರ ಆದೇಶ ಹೊರಡಿಸುತ್ತದೆ. ಆದರೆ ಈ ಬಾರಿ ಕೊರೊನಾ ಮಹಾಮಾರಿಯ ಕಾರಣಕ್ಕಾಗಿ ಏಪ್ರಿಲ್ ಹಾಗೂ ಮೇ ತಿಂಗಳುಗಳಲ್ಲಿ ಮೀನುಗಾರಿಕೆ ನಡೆಸಲು ಸಾಧ್ಯವಾಗದೇ ಮೀನುಗಾರರು ನಷ್ಟ ಅನುಭವಿಸಿದ್ದರಿಂದ 15 ದಿನಗಳು ಹೆಚ್ಚುರಿ ಅವಕಾಶ ನೀಡಿ ಜೂನ್ 15ರಿಂದ 45 ದಿನಗಳವರೆಗೆ ಮೀನುಗಾರಿಕೆ ನಿಷೇಧಿಸಿ ಆದೇಶ ಹೊರಡಿಲಾಗಿತ್ತು. ಅದರಂತೆ ಜುಲೈ 31ರಂದು ಈ ಅವಧಿ ಮುಗಿದು ಸಕಲ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಇಂದು ಮೀನುಗಾರಿಕಾ ಬೋಟುಗಳು ಕಡಲಿಗಿಳಿದಿವೆ.

ಇಂದು ಬೆಳಿಗ್ಗೆಯೇ ಮೀನುಗಾರಿಕೆಗೆ ತೆರಳಬೇಕಾದ ಹಿನ್ನೆಲೆಯಲ್ಲಿ ಬಹುತೇಕ ಎಲ್ಲ ಮೀನುಗಾರರು ತಮ್ಮ ತಮ್ಮ ಬೋಟುಗಳನ್ನು ಶುಕ್ರವಾರವೇ ಪೂಜಿಸಿ ಸಿದ್ಧವಾಗಿರಿಸಿದ್ದರು.

ಮೀನುಗಾರಿಕೆಗೆತೆರಳುವ ಎಲ್ಲ ಮೀನುಗಾರ ಕಾರ್ಮಿಕರ ಆರೋಗ್ಯ ತಪಾಸಣೆಯನ್ನು ನಡೆಸಲಾಗುತ್ತಿದೆ. ಒಟ್ಟಿನಲ್ಲಿ ಕೊರೊನಾ ಹರಡದಂತೆ ತಡೆಯುವ ಉದ್ದೇಶದಿಂದ ಸರಕಾರದ ಆದೇಶದಂತೆ ಸಾಕಷ್ಟು ಮುಂಜಾಗೃತಾ ಕ್ರಮಗಳೊಂದಿಗೆ ಈ ಬಾರಿ ಮೀನುಗಾರಿಕಾ ಬೋಟುಗಳು ಕಡಲಿಗಿಳಿದಿವೆ.

Get real time updates directly on you device, subscribe now.