ಕೊರೋನಾ ಚಿಕಿತ್ಸೆಗೆ ‘ಫವಿಪಿರಾವಿರ್’ ಮಾತ್ರೆ ಬಿಡುಗಡೆ: 35ರೂ.ಗೆ ಮಾತ್ರೆ

ಮಾತ್ರೆ ಹೆಚ್ಚು ಜನರಿಗೆ ಲಭ್ಯವಾಗಲಿ, ಜನರ ಆರ್ಥಿಕ ಹೊರೆ ತಗ್ಗಲಿ ಎಂಬ ಉದ್ದೇಶದಿಂದ ಕಡಿಮೆ ಬೆಲೆ.

ಸೌಮ್ಯ ಮತ್ತು ಮಧ್ಯಮ ಪ್ರಮಾಣದ ಕೋವಿಡ್-19 ಚಿಕಿತ್ಸೆಗಾಗಿ ಭಾರತದಲ್ಲಿ ಅಂಗೀಕರಿಸಲ್ಪಟ್ಟ ಏಕೈಕ ಮಾತ್ರೆ ಫವಿಪಿರಾವಿರ್ ಆಗಿದೆ.

ಕರಾವಳಿ ಕರ್ನಾಟಕ ವರದಿ
ನವ ದೆಹಲಿ: ಸೌಮ್ಯ ಹಾಗೂ ಮಧ್ಯಮ ಪ್ರಮಾಣದ ಕೋವಿಡ್-19 ಲಕ್ಷಣಗಳಿರುವ ರೋಗಿಗಳ ಚಿಕಿತ್ಸೆಗಾಗಿ ‘ಫ್ಲೂಗಾರ್ಡ್’ ಹೆಸರಲ್ಲಿ ‘ಫವಿಪಿರಾವಿರ್’(200mg) ಮಾತ್ರೆಗಳನ್ನು ಭಾರತದಲ್ಲಿ ‘ಸನ್ ಫಾರ್ಮಾಸ್ಯುಟಿಕಲ್ ಇಂಡಸ್ಟ್ರೀಸ್’ ಬಿಡುಗಡೆ ಮಾಡಿದೆ.

ಒಂದು ಮಾತ್ರೆಗೆ ಕೇವಲ 35ರೂ. ನಿಗದಿ ಮಾಡಲಾಗಿದ್ದು, ಈ ವಾರದಿಂದ ಮಾರುಕಟ್ಟೆಯಲ್ಲಿ ಮಾತ್ರೆಗಳು ಲಭ್ಯವಿವೆ ಎಂದು ಭಾರತೀಯ ಔಷಧ ನಿಯಂತ್ರಣ ಸಂಸ್ಥೆಗೆ ಸನ್ ಫಾರ್ಮಾ ಮಾಹಿತಿ ನೀಡಿದೆ.

ಕಡಿಮೆ ಮತ್ತು ಮಧ್ಯಮ ಪ್ರಮಾಣದ ಕೋವಿಡ್-19 ಚಿಕಿತ್ಸೆಗಾಗಿ ಭಾರತದಲ್ಲಿ ಅಂಗೀಕರಿಸಲ್ಪಟ್ಟ ಏಕೈಕ ಮಾತ್ರೆ ಫವಿಪಿರಾವಿರ್ ಆಗಿದೆ.

ಈ ಮಾತ್ರೆ ಹೆಚ್ಚು ಜನರಿಗೆ ಲಭ್ಯವಾಗಲಿ, ಜನರ ಆರ್ಥಿಕ ಹೊರೆ ತಗ್ಗಲಿ ಎಂಬ ಉದ್ದೇಶದಿಂದ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಳಿಸುತ್ತಿರುವುದಾಗಿ ಸನ್ ಫಾರ್ಮಾ ಇಂಡಿಯಾ ಸಿಇಒ ಕೀರ್ತಿ ಗಾನೋಕ್ರರ್ ಅವರು ಹೇಳಿದ್ದಾರೆ.

 

Get real time updates directly on you device, subscribe now.