ಉಡುಪಿ: ಆಸ್ಪತ್ರೆ ಎದುರು ಕಸದ ತೊಟ್ಟಿಯಲ್ಲಿ ಮಗು ಪತ್ತೆ

ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರ ನೆರವಿನಿಂದ ಮಗುವನ್ನು ಆಸ್ಪತ್ರೆಗೆ ನೀಡಲಾಗಿದೆ.

ಕರಾವಳಿ ಕರ್ನಾಟಕ ವರದಿ
ಉಡುಪಿ: ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಎದುರಿನ ಕಸದ ತೊಟ್ಟಿಯಲ್ಲಿ ನವಜಾತ ಶಿಶು ಸೋಮವಾರ ಮುಂಜಾನೆ ಪತ್ತೆಯಾಗಿದೆ.

ಆಸ್ಪತ್ರೆ ಎದುರಿನ ಹೊಟೇಲ್ ಬಳಿಯ ಕಸದ ತೊಟ್ಟಿಯಲ್ಲಿ ಹೆಣ್ಣು ಮಗುವನ್ನು ನಗರಸಭೆಯ ಸ್ವಚ್ಛತಾ ಸಿಬಂದಿ ಕಂಡಿದ್ದಾರೆ. ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರ ನೆರವಿನಿಂದ ಮಗುವನ್ನು ಆಸ್ಪತ್ರೆಗೆ ನೀಡಲಾಗಿದ್ದು, ಮಗುವಿನ ಶುಶ್ರೂಶೆ ಮಾಡಲಾಗುತ್ತಿದೆ.

Get real time updates directly on you device, subscribe now.