ಕಸ್ಟಡಿಯಲ್ಲಿ ತಂದೆ-ಮಗನ ಸಾವು ಪ್ರಕರಣದ ಆರೋಪಿ ಎಸ್ಸೈ ಕೊರೋನಾದಿಂದ ಸಾವು

ತಂದೆ-ಮಗನ ಕಸ್ಟಡಿ ಸಾವಿಗೆ ತಮಿಳ್ನಾಡಿನಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಈ ಪ್ರಕರಣ ದೇಶದಲ್ಲಿ ಬಹುದೊಡ್ಡ ಸುದ್ದಿಯಾಗಿತ್ತು.

ಕರಾವಳಿ ಕರ್ನಾಟಕ ವರದಿ
ಚೆನ್ನೈ: ತಂದೆ-ಮಗನ ಚಿತ್ರಹಿಂಸೆ ನೀಡಿ ಅವರ ಸಾವಿಗೆ ಕಾರಣವಾದ ಪ್ರಕರಣದಲ್ಲಿ ಬಂಧಿತರಾಗಿದ್ದ ಪೊಲೀಸ್ ಅಧಿಕಾರಿ ಕೋವಿಡ್19 ಸೋಂಕಿನಿಂದ ಬಳಲುತ್ತಿದ್ದು, ಸೋಮವಾರ ಸಾವಪ್ಪಿದ್ದಾರೆ.

ವಿಶೇಷ ಸಬ್ ಇನ್ಸ್‌ಪೆಕ್ಟರ್ ಪಾಲ್‌ದುರೈ(56) ಸರಕಾರಿ ರಾಜಾಜಿ ಆಸ್ಪತ್ರೆಯಲ್ಲಿ ಬೆಳಗಿನ ಜಾವ ಮೃತಪಟ್ಟರು. ಕೇಂದ್ರ ಕಾರಾಗೃಹದಲ್ಲಿದ್ದ ಪಾಲ್‌ದುರೈಗೆ ಕೋವಿಡ್ ಶೋಂಕು ಕಳೆದ ತಿಂಗಳು ದೃಢಪಟ್ಟ ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಪಿ. ಜಯರಾಜ್ ಮತ್ತು ಮಗ ಬೆನಿಕ್ಸ್ ಅವರಿಗೆ ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ ಆರೋಪದಲ್ಲಿ ಹತ್ತು ಮಂದಿ ಪೊಲೀಸ್ ಸಿಬಂಧಿ ಬಂಧನವಾಗಿತ್ತು.

ತಂದೆ-ಮಗನ ಕಸ್ಟಡಿ ಸಾವಿಗೆ ತಮಿಳ್ನಾಡಿನಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಈ ಪ್ರಕರಣ ದೇಶದಲ್ಲಿ ಬಹುದೊಡ್ಡ ಸುದ್ದಿಯಾಗಿತ್ತು.

Get real time updates directly on you device, subscribe now.