ಬಂಟ್ವಾಳ: ಕಾಲಿನಿಂದ ಪರೀಕ್ಷೆ ಬರೆದ ಕೌಶಿಕ್ ಪ್ರಥಮ ದರ್ಜೆಯಲ್ಲಿ ತೇರ್ಗಡೆ

ಯಾರ ಸಹಾಯ ಇಲ್ಲದೇ ಕಾಲಿನಿಂದ ಪರೀಕ್ಷೆ ಬರೆದ ಸಾಧನೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಶ್ಲಾಘನೆ ಪಡೆದಿತ್ತು.

ಕರಾವಳಿ ಕರ್ನಾಟಕ ವರದಿ
ಬಂಟ್ವಾಳ: ಎರಡೂ ಕೈಗಳಿಲ್ಲದ ಕಾರಣ ಕಾಲಿನಿಂದಲೇ ಪರೀಕ್ಷೆ ಬರೆದ ಬಂಟ್ವಾಳದ ಎಸ್.ವಿ.ಎಸ್. ಪ್ರೌಢಶಾಲೆ ವಿದ್ಯಾರ್ಥಿ ಕೌಶಿಕ್ ಆಚಾರ್ಯ ಶೇ.68 ಅಂಕ(625ಕ್ಕೆ 424) ಪಡೆದು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾನೆ.

ಕಂಚಿಕಾರ ಪೇಟೆಯ ರಾಜೇಶ್ ಆಚಾರ್ಯ ಮತ್ತು ಜಲಜಾಕ್ಷಿಯವರ ಪುತ್ರ ಕೌಶಿಕ್ ಯಾರ ಸಹಾಯ ಇಲ್ಲದೇ ಕಾಲಿನಿಂದ ಪರೀಕ್ಷೆ ಬರೆದ ಸಾಧನೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಶ್ಲಾಘನೆ ಪಡೆದಿತ್ತು.

ಪಿಯುಸಿಯಲ್ಲಿ ವಾಣಿಜ್ಯ ವಿಷಯ ಆಯ್ಕೆ ಮಾಡುವ ಇಚ್ಛೆ ಕೌಶಿಕ್ ಹೊಂದಿದ್ದಾನೆ. ಕೌಶಿಕ್‌ ವಿದ್ಯಾಭ್ಯಾಸಕ್ಕೆ ಶಾಸಕ ರಾಜೇಶ್ ನಾಯ್ಕ್ ನೆರವಿನ ಭರವಸೆ ನೀಡಿದ್ದಾರೆ.

Get real time updates directly on you device, subscribe now.