ರಸ್ತೆಗೆ ಅಡ್ಡ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶ: ಬೈಕ್ ಸವಾರ ಸಜೀವ ದಹನ

ಮುಂಜಾನೆ ಸಮಯ ರಸ್ತೆಗೆ ಅಡ್ಡವಾಗಿ ನೇತಾಡುತ್ತಿದ್ದ ವಿದ್ಯುತ್ ತಂತಿ ಬೈಕಿಗೆ ಸಿಲುಕಿಕೊಂಡಿದೆ.

ಕರಾವಳಿ ಕರ್ನಾಟಕ ವರದಿ
ಕಡಬ: ನಿಂತಿಕಲ್ಲು ಬಳಿಯ ಕಲ್ಲೇರಿ ಗುಳಿಗನಕಟ್ಟೆ ಎಂಬಲ್ಲಿ ರಸ್ತೆಗೆ ಅಡ್ಡವಾಗಿ ನೇತಾಡುತ್ತಿದ್ದ ಹೈಟೆನ್ಶನ್ ವಿದ್ಯುತ್ ತಂತಿ ಸ್ಪರ್ಶಕ್ಕೊಳಗಾದ ಬೈಕ್ ಸವಾರ ಬೈಕ್ ಸಹಿತ ಬೆಂಕಿಗಾಹುತಿಯಾದ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.

ಮೃತರನ್ನು ಮಂಡೆಕೋಲು ಗ್ರಾಮದ ಮೈತ್ತಡ್ಕ ತಿಮ್ಮಪ್ಪ ಗೌಡರ ಮಗ ಉಮೇಶ್(45) ಎಂದು ಗುರುತಿಸಲಾಗಿದೆ.

ಬಳ್ಪದಲ್ಲಿರುವ ಪತ್ನಿಯ ಮನೆಯಿಂದ ಮುಂಜಾನೆ ಸಮಯ ಬೈಕಿನಲ್ಲಿ ಬರುತ್ತಿದ್ದ ಸಮಯ ತುಂಡಾಗಿ ರಸ್ತೆಗೆ ಅಡ್ಡವಾಗಿ ನೇತಾಡುತ್ತಿದ್ದ ವಿದ್ಯುತ್ ತಂತಿ ಬೈಕಿಗೆ ಸಿಲುಕಿಕೊಂಡಿದೆ. ಬೈಕ್ ಸವಾರ ಉಮೇಶ್ ಸಜೀವ ದಹನ ಗೊಂಡಿದ್ದಾರೆ.

Get real time updates directly on you device, subscribe now.