ಕೋವಿಡ್19 ಚಿಕಿತ್ಸೆಗೆ ಅತೀ ಅಗ್ಗದ ‘ರೆಮ್‌ಡೆಸಿವಿರ್’ ಔಷಧ ಬಿಡುಗಡೆ

100 ಮಿಲಿ ಗ್ರಾಂ ಇಂಜಕ್ಷನ್‌ಗೆ 2800 ರೂ.

ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿರುವ ಕೋವಿಡ್-19 ರೋಗಿಗಳ ಚಿಕಿತ್ಸೆಗಾಗಿ ದೇಶಾದ್ಯಂತ ದೊರೆಯುವಂತೆ ವಿತರಣೆ.

ಕರಾವಳಿ ಕರ್ನಾಟಕ ವರದಿ
ನವದೆಹಲಿ: ಕೋವಿಡ್-19 ಸೋಂಕಿತ  ರೋಗಿಗಳಿಗಾಗಿ ‘ರೆಮ್‌ಡೆಸಿವಿರ್’ ಹೆಸರಿನಲ್ಲಿ ಔಷಧವನ್ನು ದೇಶದ ಔಷಧ ತಯಾರಕ ಸಂಸ್ಥೆ ಜೈಡಸ್ ಕ್ಯಾಡಿಲಾ ಗುರುವಾರ ಮಾರುಕಟ್ಟೆಗೆ ಪರಿಚಯಿಸಿದೆ. ಬೆಲೆ 100 ಮಿಲಿ ಗ್ರಾಂ ಇಂಜಕ್ಷನ್‌ಗೆ 2800 ರೂ. ಆಗಿದ್ದು, ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿರುವ ಕೋವಿಡ್-19 ರೋಗಿಗಳ ಚಿಕಿತ್ಸೆಗಾಗಿ ದೇಶಾದ್ಯಂತ ದೊರೆಯುವಂತೆ ವಿತರಣೆ ಮಾಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.

ಕೋವಿಡ್-19 ಚಿಕಿತ್ಸೆಯಲ್ಲಿ ರೋಗಿಗಳಿಗೆ ಅತೀ ಅಗ್ಗದ ಬೆಲೆಯಲ್ಲಿ ದೊರೆಯುವ ಉತ್ತಮ ಔಷಧ ಇದಾಗಿದೆ. ಈ ಬಗ್ಗೆ ಕ್ಯಾಡಿಲಾ ಹೆಲ್ತ್‌ಕೇರ್ ಲಿ. ನಿರ್ದೇಶಕ ಡಾ. ಶಾರ್ವಿಲ್ ಪಟೇಲ್ ಮಾಹಿತಿ ನೀಡಿದರು.

ಕೊರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಲಸಿಕೆ ಅಭಿವೃದ್ಧಿ, ಉತ್ಪಾದನೆ, ವಿತರಣೆ ಹೆಚ್ಚಳ ಅಥವಾ ಹೊಸ ಅನ್ವೇಷಣೆಯತ್ತ ಸಂಸ್ಥೆಯ ಗಮನ ಕೇಂದ್ರಿಕರಿಸಿರುವುದಾಗಿ ಪಟೇಲ್ ತಿಳಿಸಿದ್ದಾರೆ.

ಜೈಡಸ್ ಕ್ಯಾಡಿಲಾ ಅಭಿವೃದ್ಧಿ ಪಡಿಸಿದ zycov-D ಲಸಿಕೆ ಎರಡನೇ ಹಂತದ ಕ್ಲಿನಿಕಲ್ ಪ್ರಯೋಗದಲ್ಲಿದೆ.

 

 

Get real time updates directly on you device, subscribe now.