ಶೃಂಗೇರಿ: ಶಂಕರಾಚಾರ್ಯ ಪುತ್ಥಳಿ ಮೇಲೆ ಬ್ಯಾನರ್; ಸಂಘ ಪರಿವಾರ ಸಂಘಟನೆ ಪ್ರತಿಭಟನೆ

ಮಾಜಿ ಸಚಿವ ಡಿ.ಎನ್.ಜೀವರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಎಸ್‌ಡಿಪಿಐ ಪಕ್ಷವನ್ನು ಈ ವಿಚಾರದಲ್ಲಿ ಎಳೆದು ತರುವುದು ಜೀವರಾಜ್ ಅವರಂಥವರಿಗೆ ಶೋಭೆಯಲ್ಲ ಎಂದು ಎಸ್ಡಿಪಿಐ ಜಿಲ್ಲಾಧ್ಯಕ್ಷ ಅಝ್ಮತ್ ಪಾಷಾ ಪ್ರತಿಕ್ರಿಯಿಸಿದ್ದಾರೆ

ಕರಾವಳಿ ಕರ್ನಾಟಕ ವರದಿ
ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿಯಲ್ಲಿ ಶಂಕರಾಚಾರ್ಯರ ಪುತ್ಥಳಿಯ ಗೋಪುರದ ಮೇಲೆ ಧಾರ್ಮಿಕ ಸಂಕೇತಗಳಿರುವ ಬ್ಯಾನರ್ ಪತ್ತೆಯಾದ ಹಿನ್ನೆಲೆಯಲ್ಲಿ ಬಿಜೆಪಿ, ಸಂಘಪರಿವಾರ ಮುಖಂಡರು ಜಮಾಯಿಸಿ ಮಾಜಿ ಶಾಸಕ ಡಿ.ಎನ್.ಜೀವರಾಜ್ ನೇತೃತ್ವದಲ್ಲಿ ಪ್ರತಿಭಟಿಸಿದರು.

ಶೃಂಗೇರಿ ಪಟ್ಟಣದ ಪೊಲೀಸ್ ಠಾಣೆ ಬಳಿ ಮಾಜಿ ಸಚಿವ ಡಿ.ಎನ್.ಜೀವರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಎಸ್‌ಡಿಪಿಐ ಬಾವುಟ ಹಾಕಿ ಕೋಮು ಸಾಮರಸ್ಯ ಕದಡುವ ಹುನ್ನಾರ ನಡೆಸಲಾಗಿದೆ. ಕೂಡಲೇ ಕಿಡಿಗೇಡಿಗಳನ್ನು ಬಂಧಿಸದಿದ್ದರೆ ಪುತ್ಥಳಿಯ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಪುತ್ಥಳಿ ಬಳಿ ಪತ್ತೆಯಾಗಿರುವುದು ಬಾವುಟವಲ್ಲ. ಅದು ಯಾವುದೋ ಕಾರ್ಯಕ್ರಮದ ಬ್ಯಾನರ್ ಇದ್ದಂತಿದೆ. ಈ ಘಟನೆಗೂ ಎಸ್‌ಡಿಪಿಐಗೂ ಸಂಬಂಧವೇ ಇಲ್ಲ. ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಬಂಧಿಸಲಿ. ಎಸ್‌ಡಿಪಿಐ ಪಕ್ಷವನ್ನು ಈ ವಿಚಾರದಲ್ಲಿ ಎಳೆದು ತರುವುದು ಜೀವರಾಜ್ ಅವರಂಥವರಿಗೆ ಶೋಭೆಯಲ್ಲ ಎಂದು ಎಸ್ಡಿಪಿಐ ಜಿಲ್ಲಾಧ್ಯಕ್ಷ ಅಝ್ಮತ್ ಪಾಷಾ ಪ್ರತಿಕ್ರಿಯಿಸಿದ್ದಾರೆ.

 

Get real time updates directly on you device, subscribe now.