ಡಾ. ಕಫೀಲ್ ಖಾನ್ ಬಂಧನ ಕಾನೂನುಬಾಹಿರ. ತಕ್ಷಣವೇ ಬಿಡುಗಡೆಗೊಳಿಸಿ: ಅಲಹಾಬಾದ್ ಹೈಕೋರ್ಟ್

ಕಫೀಲ್ ಖಾನ್ ಅವರ ಮೇಲೆ ಹೇರಲಾಗಿರುವಾ ಎನ್‌ಎಸ್‌ಎ ಪ್ರಕರಣವನ್ನು ರದ್ದು ಮಾಡುವಂತೆ ಹೈಕೋರ್ಟ್ ಯೋಗಿ ಆದಿತ್ಯನಾಥ ನೇತೃತ್ವದ ಉತ್ತರ ಪ್ರದೇಶ ಸರ್ಕಾರಕ್ಕೆ ಆದೇಶ ನೀಡಿದೆ.

ಕರಾವಳಿ ಕರ್ನಾಟಕ ವರದಿ
ಲಖನೌ: ರಾಷ್ಟ್ರೀಯ ಭದ್ರತಾ ಕಾಯ್ದೆಯಡಿಯಲ್ಲಿ ಬಂಧಿತರಾಗಿ ಜೈಲಿನಲ್ಲಿರುವ ಉತ್ತರ ಪ್ರದೇಶದ ವೈದ್ಯ ಡಾ. ಕಫೀಲ್ ಖಾನ್ ಅವರನ್ನು ತಕ್ಷಣವೇ ಬಿಡುಗಡೆ ಮಾಡಬೇಕೆಂದು ಅಲಹಾಬಾದ್ ಹೈಕೋರ್ಟ್ ಆದೇಶ ನೀಡಿದೆ. ರಾಷ್ಟ್ರೀಯ ಭದ್ರತಾ ಕಾಯ್ದೆಯ ಅಡಿಯಲ್ಲಿ ಅವರ ಬಂಧನವು ಕಾನೂನುಬಾಹಿರವಾಗಿದ್ದು ತಕ್ಷಣವೇ ಕಫೀಲ್ ಖಾನ್ ಅವರ ಮೇಲೆ ಹೇರಲಾಗಿರುವಾ ಎನ್‌ಎಸ್‌ಎ ಪ್ರಕರಣವನ್ನು ರದ್ದು ಮಾಡುವಂತೆ ಹೈಕೋರ್ಟ್ ಯೋಗಿ ಆದಿತ್ಯನಾಥ ನೇತೃತ್ವದ ಉತ್ತರ ಪ್ರದೇಶ ಸರ್ಕಾರಕ್ಕೆ ಆದೇಶ ನೀಡಿದೆ.

ಡಾ. ಕಫೀಲ್ ಖಾನ್ ಅಲೀಘಡ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಡಿಸೆಂಬರ್ 10, 2019 ರಂದು ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಭಾಷಣ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಡಾ ಕಫೀಲ್ ಖಾನ್ ಅವರ ವಿರುದ್ಧ ಉತ್ತರ ಪ್ರದೇಶ ಸರ್ಕಾರ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿ ಜೈಲಿಗೆ ತಳ್ಳಿತ್ತು.

ಡಾ. ಕಫೀಲ್ ಖಾನ್ ಈ ಹಿಂದೆ ಗೋರಖ್‌ಪುರದ ಆಸ್ಪತ್ರೆಯ ವೈದ್ಯರಾಗಿದ್ದು ಅಲ್ಲಿ ಹಲವು ಮಕ್ಕಳು ಮೃತಪಟ್ಟಬಳಿಕ ಅವರ ವಿರುದ್ಧ ಪ್ರಕರಣ ದಾಖಲಿಸಿ ಆಗಲೂ ಜೈಲಿಗೆ ತಳ್ಳಲಾಗಿತ್ತು. ಆ ಬಳಿಕ ಅವರಿಗೆ ಕ್ಲೀನ್ ಚಿಟ್ ಸಿಕ್ಕಿದ್ದರೂ ಉತ್ತರ ಪ್ರದೇಶ ಸರ್ಕಾರ ಅವರನ್ನು ಸೇವೆಗೆ ವಾಪಾಸು ನೇಮಕ ಮಾಡಿರಲಿಲ್ಲ.

ಜನವರಿ 2020 ರಿಂದ ಎನ್‌ಎಸ್ಎ ಕಾಯ್ದೆಯಡಿಯಲ್ಲಿ ಬಂಧಿತರಾಗಿ ಯಾವುದೇ ವಿಚಾರಣೆಯೂ ಇಲ್ಲದೆ ಬಂಧನದಲ್ಲಿ ಇರಿಸಲಾಗಿದ್ದ ಕಫೀಲ್ ಖಾನ್ ಅವರಿಗೆ ಇದೀಗ ಅಲಹಾಬಾದ್ ಹೈಕೋರ್ಟ್ ತಕ್ಷಣವೇ ಬಿಡುಗಡೆಯ ಭಾಗ್ಯ ನೀಡಿದೆ. ಡಾ. ಕಫೀಲ್ ವಿರುದ್ಧ ಅಕ್ರಮವಾಗಿ ಎನ್‌ಎಸ್ಎ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿದ್ದ ಯೋಗಿ ಆದಿತ್ಯನಾಥ ಸರ್ಕಾರ ಮುಖಭಂಗಕ್ಕೆ ಈಡಾಗಿದೆ.

Get real time updates directly on you device, subscribe now.