ಜನಪರ ಹೋರಾಟಗಾರ, ಆರ್ಯ ಸಮಾಜದ ನಾಯಕ ಸ್ವಾಮಿ ಅಗ್ನಿವೇಶ್ ನಿಧನ

ಭ್ರಷ್ಟಾಚಾರ ಮತ್ತು ಕೋಮುವಾದದ ಕಡು ವಿರೋಧಿಯಾಗಿದ್ದ ಸ್ವಾಮಿ ಅಗ್ನಿವೇಶ್.

ಇಳಿ ವಯಸ್ಸಿನಲ್ಲೂ ತಾನು ನಂಬಿದ ಜನಪರ ಸಿದ್ದಾಂತಕ್ಕಾಗಿ ಹೋರಾಡುತ್ತಿದ್ದರು.

ಕರಾವಳಿ ಕರ್ನಾಟಕ ವರದಿ
ನವದೆಹಲಿ: ಆರ್ಯ ಸಮಾಜದ ನಾಯಕ, ಜನಪರ-ಕೋಮು ಸೌಹಾರ್ದಪರ ಹೋರಾಟಗಾರ ಸ್ವಾಮಿ ಅಗ್ನಿವೇಶ್(80) ಬಹುಅಂಗಾಗ ವೈಫಲ್ಯದಿಂದ ಶುಕ್ರವಾರ ಸಂಜೆ ಮೃತಪಟ್ಟಿದ್ದಾರೆ. ಐಎಲ್‌ಬಿಎಸ್ ಆಸ್ಪತ್ರೆಯಲ್ಲಿ ಕೆಲ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಸ್ವಾಮಿ ಅಗ್ನಿವೇಶ್ ಅವರು ಚಿಕಿತ್ಸೆ ಫಲಕಾರಿಯಾಗದೇ ನಿಧನ ಹೊಂದಿದ್ದಾರೆ.

ಹರ್ಯಾಣದ ಮಾಜಿ ಶಾಸಕರಾದ ಅಗ್ನಿವೇಶ್ ಎಪ್ಪತ್ತರ ದಶಕದಲ್ಲಿ ಆರ್ಯ ಸಭಾ ಎಂಬ ರಾಜಕೀಯ ಪಕ್ಷ ಸ್ಥಾಪಿಸಿದ್ದರು.

ಭ್ರಷ್ಟಾಚಾರ ಮತ್ತು ಕೋಮುವಾದದ ಕಡು ವಿರೋಧಿಯಾಗಿದ್ದ ಸ್ವಾಮಿ ಅಗ್ನಿವೇಶ್ ಇಳಿ ವಯಸ್ಸಿನಲ್ಲೂ ತಾನು ನಂಬಿದ ಜನಪರ ಸಿದ್ದಾಂತಕ್ಕಾಗಿ ಹೋರಾಡುತ್ತಿದ್ದರು.

 

Get real time updates directly on you device, subscribe now.