ಬೆಳ್ತಂಗಡಿ: ಬಾಲಕಿಗೆ ಕಿರುಕುಳಗೈದ ತೋಟದ ಮಾಲಕ, ಸಹಾಯಕ ಸೆರೆ

ತಾಯಿಯ ಜೊತೆ ತೋಟದ ಕೆಲಸಕ್ಕೆ ಬಂದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ.

ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದರೂ ಧರ್ಮಸ್ಥಳ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿದ್ದಾರೆ.

ಕರಾವಳಿ ಕರ್ನಾಟಕ ವರದಿ
ಬೆಳ್ತಂಗಡಿ: ತಾಯಿಯ ಜೊತೆ ತೋಟದ ಕೆಲಸಕ್ಕೆ ಬಂದು ಮೂರು ದಿನ ತಂಗಿದ್ದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ತೋಟದ ಮಾಲಕ ಮತ್ತು ಆತನ ಸ್ನೇಹಿತನನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ.

ಕಳೆಂಜ ಗ್ರಾಮದ ಬಳ್ಕಾಜೆ ರೆಜಿಮೋನು ಮತ್ತು ಆತನ ಸಹಾಯಕ ಕೃಷ್ಣ ಬಂಧಿತ ಆರೋಪಿಗಳಾಗಿದ್ದಾರೆ.

ಚಾರ್ಮಾಡಿಯ ದಲಿತ ಮಹಿಳೆ ರೆಜಿಮೋನು ತೋಟದ ಕೆಲಸಕ್ಕೆ ಮೇ ತಿಂಗಳಿನಲ್ಲಿ ಹೋಗುತ್ತಿದ್ದು, ಈ ಸಂದರ್ಭ ಅವರೊಂದಿಗೆ ಅವರ ಅಪ್ರಾಪ್ತ ವಯಸ್ಸಿನ ಮಗಳೂ ತೋಟದ ಹೋಗುತ್ತಿದ್ದು, ಇಲ್ಲಿ ತಂಗಿದ್ದ ಸಂದರ್ಭ ರೆಜಿಮೋನು ತನ್ನ ಗೆಳೆಯ ಕೃಷ್ಣನ ಜೊತೆ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ.

ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದರೂ ಧರ್ಮಸ್ಥಳ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿದ್ದಾರೆ.

Get real time updates directly on you device, subscribe now.