ಕಾಸರಗೋಡು: ಸಿಪಿಐ(ಎಂ) ಕಾರ್ಯಕರ್ತನ ಕೊಲೆ ಪ್ರಕರಣದಲ್ಲಿ ಬಿಜೆಪಿ ಕಾರ್ಯಕರ್ತನಿಗೆ ಜೀವಾವಧಿ ಸಜೆ

ಸೆಷನ್ಸ್ ನ್ಯಾಯಾಲಯ(2) ಜೀವಾವಧಿ ಕಠಿಣ ಸಜೆ ಮತ್ತು ಎರಡು ಲಕ್ಷ ರೂ. ದಂಡ ವಿಧಿಸಿ ಮಹತ್ವದ ತೀರ್ಪು ಪ್ರಕಟಿಸಿದೆ.

ದಂಡದ ಹಣವನ್ನು ಕೊಲೆಯಾದ ಮುರಳಿಯವರ ಕುಟುಂಬಕ್ಕೆ ನೀಡಲು ಕೋರ್ಟ್ ತೀರ್ಪಿತ್ತಿದೆ.

ಕರಾವಳಿ ಕರ್ನಾಟಕ ವರದಿ
ಕಾಸರಗೋಡು: ಸಿಪಿಐ(ಎಂ) ಕಾರ್ಯಕರ್ತ ಕುಂಬಳೆ ಶಾಂತಿಪಳ್ಳದ ಪಿ. ಮುರಳಿ(35) ಕೊಲೆ ಪ್ರಕರಣದಲ್ಲಿ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತ ಅನಂತಪುರದ ಶರತ್ ರಾಜ್ ಎಂಬವನಿಗೆ ಸೆಷನ್ಸ್ ನ್ಯಾಯಾಲಯ(2) ಜೀವಾವಧಿ ಕಠಿಣ ಸಜೆ ಮತ್ತು ಎರಡು ಲಕ್ಷ ರೂ. ದಂಡ ವಿಧಿಸಿ ಮಹತ್ವದ ತೀರ್ಪು ಪ್ರಕಟಿಸಿದೆ.

ಶರತ್ ರಾಜ್

ದಂಡದ ಹಣವನ್ನು ಕೊಲೆಯಾದ ಮುರಳಿಯವರ ಕುಟುಂಬಕ್ಕೆ ನೀಡಲು ಕೋರ್ಟ್ ತೀರ್ಪಿತ್ತಿದೆ. ದಂಡ ತೆರಲು ತಪ್ಪಿದಲ್ಲಿ ಮತ್ತೆ ಜೀವಾವಧಿ ಶಿಕ್ಷೆ ವಿಧಿಸಲಾಗುವುದೆಂದು ಕೋರ್ಟ್ ಎಚ್ಚರಿಕೆ ನೀಡಿದೆ

ಈ ಪ್ರಕರಣದ ಇತರ ಆರು ಆರೋಪಿಗಳು, ಆರೋಪ ಸಾಬೀತಾಗದ ಹಿನ್ನೆಲೆಯಲ್ಲಿ ನ್ಯಾಯಾಲಯ ಖುಲಾಸೆಗೊಳಿಸಿದೆ. ದಿನೇಶ್, ವರದರಾಜ್, ಮಿಥುನ್ ಕುಮಾರ್, ನಿತಿನ್ ರಾಜ್, ಮಹೇಶ್, ಅಜಿತ್ ಕುಮಾರ್ ಎಂಬವರು ಖುಲಾಸೆಗೊಂಡಿದ್ದಾರೆ.

ಸೀತಾಂಗೋಳಿ ಬಳಿ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಮುರಳಿಯವರನ್ನು ತಡೆದು ಮಾರಕಾಸ್ತ್ರಗಳಿಂದ ಕೊಲೆಗೈಯಲಾಗಿತ್ತು.

ಪ್ರಾಸಿಕ್ಯೂಷನ್ ಪರ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಅಬ್ದುಲ್ ಸತ್ತಾರ್ ಅವರು ಹಾಜರಾಗಿದ್ದರು.

 

Get real time updates directly on you device, subscribe now.