ಗಾಯಕಿ ಅನುರಾಧ ಪೌಡ್ವಾಲ್ ಪುತ್ರ ಆದಿತ್ಯ ಇನ್ನಿಲ್ಲ

ಆದಿತ್ಯ ಹಲವು ವರ್ಷಗಳಿಂದ ಅನಾರೋಗ್ಯ ಪೀಡಿತರಾಗಿದ್ದರು.

ಹಲವು ಸಿನಿಮಾಗಳಿಗೆ ಸಂಗೀತ ನಿರ್ದೇಶನ ನೀಡಿರುವ ಆದಿತ್ಯ.

ಕರಾವಳಿ ಕರ್ನಾಟಕ ವರದಿ
ಮುಂಬಯಿ: ಸಂಗೀತ ನಿರ್ದೇಶಕ ಹಾಗೂ ಖ್ಯಾತ  ಗಾಯಕಿ ಅನುರಾಧ ಪೌಡ್ವಾಲ್ ಅವರ ಪುತ್ರ ಆದಿತ್ಯ ಪೌಡ್ವಾಲ್(35) ಅವರು ಕಿಡ್ನಿ ವೈಫಲ್ಯದಿಂದ ಶನಿವಾರ ನಿಧನರಾಗಿದ್ದಾರೆ.

ಕಳೆದ ನಾಲ್ಕು ದಿನಗಳಿಂದ ಆದಿತ್ಯ ಆಸ್ಪತ್ರೆಯ ಐಸಿಯುನಲ್ಲಿ ದಾಖಲಾಗಿದ್ದರು.

ಆದಿತ್ಯ ಹಲವು ವರ್ಷಗಳಿಂದ ಅನಾರೋಗ್ಯ ಪೀಡಿತರಾಗಿದ್ದರು. ಅವರಿಗೆ ಅಧಿಕ ರಕ್ತದೊತ್ತಡವಿತ್ತು. ಅವರ ನಿಧನ ಬೇಸರದ ಸಂಗತಿ ಎಂದು ಗಾಯಕ ಶಂಕರ್ ಮಹದೇವನ್ ತಿಳಿಸಿದ್ದಾರೆ.

ಹಲವು ಸಿನಿಮಾಗಳಿಗೆ ಸಂಗೀತ ನಿರ್ದೇಶನ ನೀಡಿರುವ ಆದಿತ್ಯ ಅವರು ಥ್ಯಾಕರೆ ಸಿನಿಮಾಗೆ ಸಂಗೀತ ನೀಡಿದ್ದಾರೆ.

 

Get real time updates directly on you device, subscribe now.