ಕುಂದಾಪುರ: ‘ಸಮೃದ್ದ ಜೀವನ’ ಸಂಸ್ಥೆಯಿಂದ ಲಕ್ಷಾಂತರ ರೂ. ವಂಚನೆ – ಪೊಲೀಸ್ ಠಾಣೆ ಮೆಟ್ಟಿಲೇರಿದ ಸಂತ್ರಸ್ತೆ

ದೇವಲ್ಕುಂದ ಗ್ರಾಮದ ನೊಬರ್ಟ್ ಲೂವಿಸ್ ಎಂಬವರ ಪತ್ನಿ ಕಾರ್ಮಿನ್ ಲೂವಿಸ್.

ಹಣ ಬಹಳ ಬೇಗ ದ್ವಿಗುಣವಾಗುವುದಾಗಿ ಸಂಸ್ಥೆ ನೀಡಿದ ಆಶ್ವಾಸನೆ ನಂಬಿ ಕಾರ್ಮಿನ್ ಲೂವಿಸ್ ಅವರು 3,81,000 /- ರೂ. ಮತ್ತು ಇತರ ಗ್ರಾಹಕರಿಂದ 64,43,900/- ರೂ( ಒಟ್ಟು 68,24,900ರೂ.) ತೊಡಗಿಸಿದ್ದರು.

ಕರಾವಳಿ ಕರ್ನಾಟಕ ವರದಿ
ಕುಂದಾಪುರ: ಸಮೃದ್ದ ಜೀವನ ಫಂಡ್ಸ್, ಇಂಡಿಯಾ ಲಿಮಿಟೆಡ್, ಸಮೃದ್ದ ಜೀವನ ಮಲ್ಟಿ ಸ್ಟೇಟ್-ಮಲ್ಟಿ ಪರ್ಪಸ್ ಕೋ ಅಪರೇಟಿವ್  ಸೊಸೈಟಿ ಲಿಮಿಟೆಡ್ ಹಾಗೂ ಪ್ರಾಸ್ಪರಿಟಿ ಆಗ್ರೋ ಇಂಡಿಯಾ ಸಂಸ್ಥೆಯಲ್ಲಿ ಹಣ ಬೇಗ ದ್ವಿಗುಣ ಮಾಡುವುದಾಗಿ ವಂಚಿಸಲಾಗಿದೆ ಎಂದು ಪೊಲೀಸ್ ದೂರು ನೀಡಲಾಗಿದೆ.

ದೇವಲ್ಕುಂದ ಗ್ರಾಮದ ನೊಬರ್ಟ್ ಲೂವಿಸ್ ಎಂಬವರ ಪತ್ನಿ ಕಾರ್ಮಿನ್ ಲೂವಿಸ್ ಅವರು ಸಂಸ್ಥೆ ತಮಗೆ ಮೋಸ ಮಾಡಿದೆ ಎಂದು ಪೊಲೀಸರಿಗೆ ದೂರಿನಲ್ಲಿ ವಿವರಿಸಿದ್ದಾರೆ.

ಕುಂದಾಪುರದ ಕೆ.ಎಸ್.ಆರ್.ಟಿ.ಸಿ ಬಸ್‌ ನಿಲ್ದಾಣದ ಎದುರು ‘ಕಾಂಚನ ಕಾಂಪ್ಲೆಕ್ಸ್’ ನಲ್ಲಿದ್ದ  ಸಂಸ್ಥೆಯು  ಸರ್ಕಾರದ ಮಲ್ಟಿ ಸ್ಟೇಟ್ ಕೋ- ಅಪರೇಟಿವ್ ಸೊಸೈಟಿಯ ಕಾನೂನಿನ ಅಡಿಯಲ್ಲಿ ರಿಜಿಸ್ಟ್ರೇಶನ್ ಆಗಿದೆ ಎಂದು ನಂಬಿಸಿ ಹಣವನ್ನು ಹೂಡಿಕೆ ಮಾಡುವಂತೆ ಜನರನ್ನು ಪ್ರೇರೇಪಿಸಿತ್ತು. ಹಣ ಬಹಳ ಬೇಗ ದ್ವಿಗುಣವಾಗುವುದಾಗಿ ಸಂಸ್ಥೆ ನೀಡಿದ ಆಶ್ವಾಸನೆ ನಂಬಿ ಕಾರ್ಮಿನ್ ಲೂವಿಸ್ ಅವರು 3,81,000 /- ರೂ. ಮತ್ತು ಇತರ ಗ್ರಾಹಕರಿಂದ 64,43,900/- ರೂ( ಒಟ್ಟು 68,24,900ರೂ.) ತೊಡಗಿಸಿದ್ದರು.

ಮೆಚ್ಯೂರಿಟಿ ಕಾಲಕ್ಕೆ ಮಹೇಶ್ ಕಿಸಾನ್ ಮೊಂತೆವಾರ್, ಪ್ರಸಾದ್, ವೈಶಾಲಿ ಮೊಂತೆವಾರ್ ಗ್ರಾಹಕರಿಗೆ ಮೋಸ ಮಾಡುವ ಉದ್ದೇಶದಿಂದ ತಮ್ಮ ಕಚೇರಿ ಮುಚ್ಚಿದ್ದಾರೆ ಎಂದು ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 133/2020 ಕಲಂ: 406, 420 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

Get real time updates directly on you device, subscribe now.