ಮಂಗಳೂರು: ಡೆತ್ ನೋಟ್ ಬರೆದಿಟ್ಟು ವಿವಾಹಿತೆ ಆತ್ಮಹತ್ಯೆ

ಶಿಲ್ಪಾ ಹನ್ನೊಂದು ತಿಂಗಳ ಮಗುವಿನ ತಾಯಿ ಎಂದು ತಿಳಿದುಬಂದಿದೆ.

ತಹಶೀಲ್ದಾರ್ ಸಮ್ಮುಖ ಮರಣೋತ್ತರ ಪರೀಕ್ಷೆ ಬಳಿಕ ಅಂತ್ಯಸಂಸ್ಕಾರ.

ಕರಾವಳಿ ಕರ್ನಾಟಕ ವರದಿ
ಮಂಗಳೂರು: ವಿವಾಹಿತ ಯುವತಿಯೋರ್ವರು ಫ್ಯಾನ್‌ಗೆ ಚೂಡಿದಾರ ಶಾಲ್‌ನಿಂದ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ವರದಿಯಾಗಿದೆ.

ಗುರುಪುರ ಭಜನಾ ಮಂದಿರ ಸಮೀಪದ ನಿವಾಸಿ, ಜುವೆಲ್ಲರಿ ಮಾಲಕರ ಪುತ್ರಿ ಶಿಲ್ಪಾ(28) ಬೆಳಿಗ್ಗೆ 11ಗಂಟೆ ಸುಮಾರಿಗೆ ಆತ್ಮಹತ್ಯೆಗೈದಿದ್ದಾರೆ.

ಈಕೆಯ ಪತಿ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದಾರೆ. ಊರಿಗೆ ಬಂದಿದ್ದ ಶಿಲ್ಪಾ ಮನೆಯಿಂದಲೇ ಕೆಲಸ ಮಾಡುತ್ತಿದ್ದರು. ಹನ್ನೊಂದು ತಿಂಗಳ ಮಗುವಿನ ತಾಯಿ ಎಂದು ತಿಳಿದುಬಂದಿದೆ.

ಶಿಲ್ಪಾ ಡೆತ್‌ನೋಟ್ ಬರೆದಿಟ್ಟಿದ್ದಾರೆ. ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ತಹಶೀಲ್ದಾರ್ ಸಮ್ಮುಖ ಮರಣೋತ್ತರ ಪರೀಕ್ಷೆ ಬಳಿಕ ಅಂತ್ಯಸಂಸ್ಕಾರ ನಡೆಸಲಾಗಿದೆ.

 

 

Get real time updates directly on you device, subscribe now.