ನ್ಯಾಯಾಂಗ ನಿಂದನೆ ಪ್ರಕರಣ: ‘ಪ್ರಶ್ನಿಸುವ ಹಕ್ಕಿಗಾಗಿ’ ಮತ್ತೆ ಸುಪ್ರೀಂ ಮೆಟ್ಟಿಲೇರಿದ ಪ್ರಶಾಂತ್ ಭೂಷಣ್

ನ್ಯಾಯಾಂಗ ನಿಂದನೆ ಪ್ರಕರಣಗಳಲ್ಲಿ ನ್ಯಾಯಾಲಯವೇ ವಾದಿಯಾಗಿರುವುದರಿಂದ ನಿರಂಕುಶ, ಪ್ರತೀಕಾರದ ಹಾಗೂ ದರ್ಪದ ನಿರ್ಧಾರ ಕೈಗೊಳ್ಳುವ ಸಾಧ್ಯತೆ.

ಮೇಲ್ಮನವಿ ಸಲ್ಲಿಸುವ ಹಕ್ಕು ಸಂವಿಧಾನ ಮತ್ತು ಅಂತರರಾಷ್ಟ್ರೀಯ ಕಾನೂನು ಕೂಡ ಖಾತ್ರಿ ನೀಡಿರುವ ಮೂಲಭೂತ ಹಕ್ಕು. ದೋಷಪೂರ್ಣ ನಿರ್ಣಯಗಳ ಸಂದರ್ಭ ನ್ಯಾಯ ಪಡೆಯುವ ಅವಕಾಶ ಇದೆ ಎಂದು ಅರ್ಜಿಯಲ್ಲಿ ವಾದಿಸಿದ್ದಾರೆ.

ಕರಾವಳಿ ಕರ್ನಾಟಕ ವರದಿ
ನವದೆಹಲಿ: ಒಂದು ರೂ. ದಂಡ ವಿಧಿಸಲಾದ ನ್ಯಾಯಾಂಗ ನಿಂದನೆ ಕ್ರಿಮಿನಲ್ ಪ್ರಕರಣವನ್ನು ಬೇರೊಂದು ವಿಸ್ತೃತ ಪೀಠದಲ್ಲಿ ಪ್ರಶ್ನಿಸುವ ಅಧಿಕಾರ ನೀಡಲು ಕೋರಿ ಖ್ಯಾತ ನ್ಯಾಯವಾದಿ ಮತ್ತು ಸಾಮಾಜಿಕ ಹೋರಾಟಗಾರ ಪ್ರಶಾಂತ್ ಭೂಷಣ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.

ನ್ಯಾಯಾಂಗ ನಿಂದನೆ ಪ್ರಕರಣಗಳಲ್ಲಿ ನ್ಯಾಯಾಲಯವೇ ವಾದಿಯಾಗಿರುವುದರಿಂದ ನಿರಂಕುಶ, ಪ್ರತೀಕಾರದ ಹಾಗೂ ದರ್ಪದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇರುತ್ತದೆ ಎಂದು ಭೂಷಣ್ ಅರ್ಜಿಯಲ್ಲಿ ಹೇಳಿದ್ದಾರೆ.

ಮೇಲ್ಮನವಿ ಸಲ್ಲಿಸುವ ಹಕ್ಕು ಸಂವಿಧಾನ ಮತ್ತು ಅಂತರರಾಷ್ಟ್ರೀಯ ಕಾನೂನು ಕೂಡ ಖಾತ್ರಿ ನೀಡಿರುವ ಮೂಲಭೂತ ಹಕ್ಕು. ದೋಷಪೂರ್ಣ ನಿರ್ಣಯಗಳ ಸಂದರ್ಭ ನ್ಯಾಯ ಪಡೆಯುವ ಅವಕಾಶ ಇದೆ ಎಂದು ಅರ್ಜಿಯಲ್ಲಿ ವಾದಿಸಿದ್ದಾರೆ.

ಸೆ.15ರ ಒಳಗೆ ಒಂದು ರೂ. ದಂಡ ಪಾವತಿಸುವಂತೆ ಸುಪ್ರೀಂಕೋರ್ಟ್ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಪ್ರಶಾಂತ್ ಭೂಷಣ್ ಅವರಿಗೆ ಸೂಚಿಸಿತ್ತು. ಇದನ್ನು ಪ್ರಶ್ನಿಸಿ ಪ್ರಶಾಂತ್ ಭೂಷಣ್ ಪರ ನ್ಯಾಯವಾದಿ ಕಾಮಿನಿ ಜೈಸಾಲ್ ಅವರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

Get real time updates directly on you device, subscribe now.