ಮತ್ತೆ ‘ಏಮ್ಸ್’ ದಾಖಲಾದ ಕೇಂದ್ರ ಗೃಹ ಸಚಿವ ಅಮಿತ್ ಷಾ

ಕೋವಿಡ್19 ಚಿಕಿತ್ಸೆಗೆ ಒಳಗಾಗಿ ಏಮ್ಸ್‌ನಿಂದ ಬಿಡುಗಡೆಗೊಂಡಿದ್ದ ಷಾ.

ಕೊರೊನಾದಿಂದ ಚೇತರಿಸಿಕೊಂಡ ಬಳಿಕ ಉಸಿರಾಟದ ಸಮಸ್ಯೆ.

ಕರಾವಳಿ ಕರ್ನಾಟಕ ವರದಿ
ನವದೆಹಲಿ: ಕೋವಿಡ್19 ಚಿಕಿತ್ಸೆಗೆ ಒಳಗಾಗಿ ಆ.31ರಂದು ಏಮ್ಸ್‌ನಿಂದ ಬಿಡುಗಡೆಗೊಂಡಿದ್ದ ಗೃಹ ಸಚಿವ ಅಮಿತ್ ಷಾ ಅವರನ್ನು ರಾತ್ರಿ 11ಗಂಟೆಗೆ ಮತ್ತೆ ಏಮ್ಸ್‌ ಆಸ್ಪತ್ರೆಯ ಕಾರ್ಡಿಯೊ ನ್ಯೂರೊ ಟವರ್ ವಿಭಾಗದಲ್ಲಿ ದಾಖಲಿಸಲಾಗಿದೆ.

ಕೊರೊನಾದಿಂದ ಚೇತರಿಸಿಕೊಂಡ ಬಳಿಕ ಅಮಿತ್ ಷಾ(55) ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದು, ಅವರ ಆರೋಗ್ಯದ ಬಗ್ಗೆ ನಿಗಾ ವಹಿಸಲು ಆಸ್ಪತ್ರೆಗೆ ದಾಖಲಿಸುವುದು ಉತ್ತಮ ಎಂದು ಭಾವಿಸಲಾಗಿದೆ ಎಂದು ಏಮ್ಸ್ ಮೂಲಗಳು ತಿಳಿಸಿವೆ.

Get real time updates directly on you device, subscribe now.