ಬೆಳ್ತಂಗಡಿ: ಲಾರಿ ಢಿಕ್ಕಿಯಾಗಿ ಸ್ಕೂಟಿ ಚಾಲಕ ಸಾವು

ಅಳದಂಗಡಿ ಕಡೆಯಿಂದ ಬರುತ್ತಿದ್ದ ಲಾರಿ ಅಡಿಗೆ ಬಿದ್ದ ಗಿರೀಶ್ ಮೂಲ್ಯ ಅವರ ತಲೆಗೆ ಗಂಭೀರ ಏಟು.

ತಲೆ ಮೇಲೆಯೇ ಲಾರಿ ಹರಿದಿದ್ದರಿಂದ ಹೆಲ್ಮೆಟ್ ಪುಡಿಯಾಗಿತ್ತು.

ಕರಾವಳಿ ಕರ್ನಾಟಕ ವರದಿ
ಬೆಳ್ತಂಗಡಿ: ಪದಂಗಡಿ ಗ್ರಾಮದ ಬದ್ಯಾರು ಎಂಬಲ್ಲಿ ಲಾರಿ ಮತ್ತು ಸ್ಕೂಟಿ ಅಪಘಾತದಲ್ಲಿ ಸ್ಕೂಟಿ ಚಾಲಕ ಮೃತಪಟ್ಟ ಘಟನೆ ರವಿವಾರ ಮಧ್ಯಾಹ್ನ ವರದಿಯಾಗಿದೆ.

ಮೃತರನ್ನು ಗರ್ಡಾಡಿ ನಿವಾಸಿ, ಜೆಸಿಬಿ ಆಪರೇಟರ್ ಗಿರೀಶ್ ಮೂಲ್ಯ ಎಂದು ಗುರುತಿಸಲಾಗಿದೆ.

ಅಳದಂಗಡಿ ಕಡೆಯಿಂದ ಬರುತ್ತಿದ್ದ ಲಾರಿ ಅಡಿಗೆ ಬಿದ್ದ ಗಿರೀಶ್ ಮೂಲ್ಯ ಅವರ ತಲೆಗೆ ಗಂಭೀರ ಏಟು ಬಿದ್ದಿತ್ತು. ತಲೆ ಮೇಲೆಯೇ ಲಾರಿ ಹರಿದಿದ್ದರಿಂದ ಹೆಲ್ಮೆಟ್ ಪುಡಿಯಾಗಿತ್ತು.

 

Get real time updates directly on you device, subscribe now.