ಶಾಂತಿಯುತ ಪ್ರತಿಭಟನೆಗಳನ್ನು ಅಪರಾಧೀಕರಿಸುವ ಯತ್ನ ಸಲ್ಲದು: ಕೇಂದ್ರ ಸರಕಾರಕ್ಕೆ ಸಿಪಿಐ(ಎಂ) ಎಚ್ಚರಿಕೆ

ಶಾಂತಿಯುತ ರಾಜಕೀಯ ಪ್ರತಿಭಟನೆಗಳಿಗೆ ಅಪರಾಧದ ಬಣ್ಣ ಬಳಿಯಲಾಗುತ್ತಿದೆ.

ಸಾಮಾಜಿಕ ಹೋರಾಟಗಾರರ ಹೆಸರನ್ನು ಕೋಮುಗಲಭೆಯೊಂದಿಗೆ ತಳುಕುಹಾಕಲಾಗುತ್ತಿರುವುದು ಕೇಂದ್ರ ಸರಕಾರದ ಪಕ್ಷಪಾತ ಮತ್ತು ಪ್ರತೀಕಾರದ ಕ್ರಮ ಎಂದು ಸಿಪಿಐ(ಎಂ) ಕೇಂದ್ರದ ವಿರುದ್ಧ ಕಿಡಿಕಾರಿದೆ.

ಕರಾವಳಿ ಕರ್ನಾಟಕ ವರದಿ
ನವ ದೆಹಲಿ: ಫೆಬ್ರವರಿಯಲ್ಲಿ ನಡೆದಿದ್ದ ದೆಹಲಿ ಗಲಭೆಗೆ ಸಂಬಂಧಿಸಿ ಪೊಲೀಸರು ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಸಿಪಿಐ(ಎಂ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯಚೂರಿ ಹಾಗೂ ಇತರ ಹೋರಾಟಗಾರರ ಹೆಸರು ಸೇರಿಸಿರುವುದರ ವಿರುದ್ಧ ಸಿಪಿಐ(ಎಂ) ಪಕ್ಷ ಕೇಂದ್ರ ಸರಕಾರಕ್ಕೆ ಎಚ್ಚರಿಕೆ ನೀಡಿದೆ.

ಇದು ಶಾಂತಿಯುತ ಪ್ರತಿಭಟನೆಗಳನ್ನು ಅಪರಾಧೀಕರಿಸುವ ಯತ್ನ. ಶಾಂತಿಯುತ ರಾಜಕೀಯ ಪ್ರತಿಭಟನೆಗಳಿಗೆ ಅಪರಾಧದ ಬಣ್ಣ ಬಳಿಯಲಾಗುತ್ತಿದೆ ಎಂದು ಸಿಪಿಐ(ಎಂ) ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

ದೆಹಲಿ ಪೊಲೀಸರು ಕೇಂದ್ರ ಗೃಹ ಸಚಿವ ಅಮಿತ್ ಷಾ ಅಣತಿಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ ಮತ್ತು ಶಿಕ್ಷಣ – ಸಾಂಸ್ಕೃತಿಕ ವಲಯದ ವ್ಯಕ್ತಿಗಳು, ಸಾಮಾಜಿಕ ಹೋರಾಟಗಾರರ ಹೆಸರನ್ನು ಕೋಮುಗಲಭೆಯೊಂದಿಗೆ ತಳುಕುಹಾಕಲಾಗುತ್ತಿರುವುದು ಕೇಂದ್ರ ಸರಕಾರದ ಪಕ್ಷಪಾತ ಮತ್ತು ಪ್ರತೀಕಾರದ ಕ್ರಮ ಎಂದು ಸಿಪಿಐ(ಎಂ) ಕೇಂದ್ರದ ವಿರುದ್ಧ ಕಿಡಿಕಾರಿದೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಫೆಬ್ರವರಿಯಲ್ಲಿ ನಡೆದಿದ್ದ ಪ್ರತಿಭಟನೆಯಲ್ಲಿ ಸೀತಾರಾಂ ಯಚೂರಿ, ಸ್ವರಾಜ್ ಅಭಿಯಾನದ ಮುಖಂಡ ಯೋಗೇಂದ್ರ ಯಾದವ್, ಅರ್ಥಶಾಸ್ತ್ರಜ್ನೆ ಜಯಂತಿ ಘೋಷ್, ದೆಹಲಿ ವಿವಿ ಪ್ರಾಧ್ಯಾಪಕ ಅಪೂರ್ವಾನಂದ ಕುಮ್ಮಕ್ಕು ನೀಡಿದ್ದಾರೆ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

 

Get real time updates directly on you device, subscribe now.