ದೆಹಲಿ ಗಲಭೆ ಸಂಚು ಆರೋಪ: ಜೆ‌ಎನ್‌ಯು ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಬಂಧನ

ಉಮರ್ ಬಂಧನದ ಕುರಿತು ಅವರ ತಂದೆ ಇಲ್ಯಾಸ್ ಅವರು ಟ್ವಿಟರ್‌ನಲ್ಲಿ ಮಾಹಿತಿ ನೀಡಿದ್ದಾರೆ.

ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತಕ್ಕೆ ಭೇಟಿ ನೀಡುವ ಮುನ್ನ ಉಮರ್ ಅವರು ಮಾಜಿ ಎ‌ಎಪಿ ಕೌನ್ಸಿಲರ್ ಹುಸೈನ್ ಮತ್ತು ಹೋರಾಟಗಾರ ಖಾಲಿದ್ ಸೈಫಿ ಜೊತೆ ಸೇರಿ ದೆಹಲಿ ದಂಗೆಗೆ ಸಂಚು ಮಾಡಿದ್ದಾಗಿ ಪೊಲೀಸರು ಆರೋಪಿಸಿದ್ದರು.

ಕರಾವಳಿ ಕರ್ನಾಟಕ ವರದಿ
ನವ ದೆಹಲಿ: ದೆಹಲಿ ಗಲಭೆಗೆ ಸಂಬಂಧಿಸಿದಂತೆ ಜೆ‌ಎನ್‌ಯು ಮಾಜಿ ವಿದ್ಯಾರ್ಥಿ ಮುಖಂಡ ಉಮರ್ ಖಾಲಿದ್ ಅವರನ್ನು ತಡರಾತ್ರಿ ದೆಹಲಿ ಪೊಲೀಸರ ವಿಶೇಷ ಘಟಕ ಬಂಧಿಸಿದೆ.

ಸತತ 11 ಗಂಟೆಗಳ ವಿಚಾರಣೆ ಬಳಿಕ ಬಳಿಕ ಉಮರ್ ಅವರನ್ನು ಬಂಧಿಸಲಾಗಿದ್ದು, ಸೋಮವಾರ ದೆಹಲಿ ಕೋರ್ಟ್‌ಗೆ ಹಾಜರುಪಡಿಸುವ ಸಾಧ್ಯತೆ ಇದೆ.

ಉಮರ್ ಬಂಧನದ ಕುರಿತು ಅವರ ತಂದೆ ಇಲ್ಯಾಸ್ ಅವರು ಟ್ವಿಟರ್‌ನಲ್ಲಿ ಮಾಹಿತಿ ನೀಡಿದ್ದಾರೆ.

ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತಕ್ಕೆ ಭೇಟಿ ನೀಡುವ ಮುನ್ನ ಉಮರ್ ಅವರು ಮಾಜಿ ಎ‌ಎಪಿ ಕೌನ್ಸಿಲರ್ ಹುಸೈನ್ ಮತ್ತು ಹೋರಾಟಗಾರ ಖಾಲಿದ್ ಸೈಫಿ ಜೊತೆ ಸೇರಿ ದೆಹಲಿ ದಂಗೆಗೆ ಸಂಚು ಮಾಡಿದ್ದಾಗಿ ಪೊಲೀಸರು ಆರೋಪಿಸಿದ್ದರು. ಶಹೀನ್ ಭಾಗ್‌ನಲ್ಲಿ ಭೇಟಿಯಾಗಿ ದಂಗೆ ಯೋಜನೆ ರೂಪಿಸಿದ್ದಾರೆ ಎಂಬ ಪೊಲೀಸರ ಆರೋಪಗಳನ್ನು ಖಾಲಿದ್ ಅವರು ನಿರಾಕರಿಸಿದ್ದರು.

ಹಲವು ವಿದ್ಯಾರ್ಥಿ ಮುಖಂಡರನ್ನು ಈಗಾಗಲೇ ಯುಎಪಿಎ ಕಾಯ್ದೆಯಡಿ ಬಂಧಿಸಲಾಗಿದೆ.

Get real time updates directly on you device, subscribe now.