ವಂಡ್ಸೆ ನಾಡಗಡಿ ಭದ್ರಮಹಾಂಕಾಳಿ ದೈವಸ್ಥಾನಕ್ಕೆ ಸೋಲಾರ್ ಸಿಸ್ಟಮ್ ಕೊಡುಗೆ

ಇತ್ತೀಚೆಗೆ ಉಪ್ಪೂರಿನ ಸ್ವಂದನ ಸೇವಾ ಸಂಸ್ಥೆಯ ವಿಶೇಷ ಮಕ್ಕಳಿಗೆ ಮತ್ತು ಕುಂದಾಪುರ ಚೈತನ್ಯ ಸೇವಾ ಸಂಸ್ಥೆಯ ಮಕ್ಕಳಿಗೆ ಮಣಿಪಾಲ ಆರೋಗ್ಯ ಕಾರ್ಡ್‌ಗಳನ್ನು ಉಚಿತವಾಗಿ ನೀಡಿದ್ದರು.

‘ದುಡಿಮೆಯ ಹಣ’ದಲ್ಲಿ ಹುಟ್ಟುಹಬ್ಬದ ನೆನಪಿಗಾಗಿ ದೈವಸ್ಥಾನಕ್ಕೆ ಉಚಿತ ಕೊಡುಗೆ.

ಕರಾವಳಿ ಕರ್ನಾಟಕ ವರದಿ
ಬೈಂದೂರು: ವಂಡ್ಸೆ ನಾಡಗಡಿಯಲ್ಲಿರುವ ಶ್ರೀ ಭದ್ರಮಹಾಂಕಾಳಿ ದೈವಸ್ಥಾನಕ್ಕೆ 15,500 ರೂಪಾಯಿ  ಮೌಲ್ಯದ ಸೆಲ್ಕೋ ಸೋಲಾರ್ ಸಿಸ್ಟಮ್ ಅನ್ನು ರಕ್ಷಿತ್ ಶೆಟ್ಟಿ ಕೊಡುಗೆ ನೀಡಿದ್ದಾರೆ.

ತನ್ನ ದುಡಿಮೆಯ ಹಣದಲ್ಲಿ ತನ್ನ ಹುಟ್ಟುಹಬ್ಬದ ನೆನಪಿಗಾಗಿ ಉಚಿತ ಕೊಡುಗೆಯಾಗಿ ನೀಡಿ ದೇವಿಯ ಕೃಪಾಕಟಾಕ್ಷಕ್ಕೆ ಪಾತ್ರನಾಗಿದ್ದೇನೆ ಎಂಬುದು ಅವರ ಭಾವನೆಯಾಗಿದೆ.

ಇತ್ತೀಚೆಗೆ ಉಪ್ಪೂರಿನ ಸ್ವಂದನ ಸೇವಾ ಸಂಸ್ಥೆಯ ವಿಶೇಷ ಮಕ್ಕಳಿಗೆ ಮತ್ತು ಕುಂದಾಪುರ ಚೈತನ್ಯ ಸೇವಾ ಸಂಸ್ಥೆಯ ಮಕ್ಕಳಿಗೆ ಮಣಿಪಾಲ ಆರೋಗ್ಯ ಕಾರ್ಡ್‌ಗಳನ್ನು ಉಚಿತವಾಗಿ ನೀಡಿದ್ದರು.

ರಕ್ಷಿತ್ ಶೆಟ್ಟಿ ವಂಡ್ಸೆ ತಿರುಮಲ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ವಂಡ್ಸೆ ಆಡಳಿತ ಮೊಕ್ತೇಸರ ವಿ.ಕೆ. ಶಿವರಾಮ ಶೆಟ್ಟಿ ಇವರ ಪುತ್ರನಾಗಿದ್ದು, ಆರ್.ಕೆ. ಗ್ರಾಫಿಕ್ಸ್ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದಾರೆ.

 

 

Get real time updates directly on you device, subscribe now.