ಬೈಕಿನಿಂದ ಬಿದ್ದ ಮಹಿಳೆ ಬಸ್ ಚಕ್ರಕ್ಕೆ ಸಿಲುಕಿ ಸಾವು

ಭಾರೀ ಮಳೆಯಿಂದಾಗಿ ರಸ್ತೆ ಗುಂಡಿಗಳಲ್ಲಿ ನೀರು ತುಂಬಿದ್ದು, ಬೈಕಿನಲ್ಲಿ ಗಂಡನ ಜೊತೆ ಹಿಂಬದಿ ಕೂತು ತೆರಳುತ್ತಿದ್ದ ಮಹಿಳೆಯ ಪ್ರಾಣವನ್ನೇ ಬಲಿತೆಗೆದುಕೊಂಡ ಕಳವಳಕಾರಿ ಘಟನೆ ವರದಿಯಾಗಿದೆ.

ಮುಂಬೈ: ಭಾರೀ ಮಳೆಯಿಂದಾಗಿ ರಸ್ತೆ ಗುಂಡಿಗಳಲ್ಲಿ ನೀರು ತುಂಬಿದ್ದು, ಬೈಕಿನಲ್ಲಿ ಗಂಡನ ಜೊತೆ ಹಿಂಬದಿ ಕೂತು ತೆರಳುತ್ತಿದ್ದ ಮಹಿಳೆಯ ಪ್ರಾಣವನ್ನೇ ಬಲಿತೆಗೆದುಕೊಂಡ ಕಳವಳಕಾರಿ ಘಟನೆ ವರದಿಯಾಗಿದೆ.

ಬೈಕ್ ಆಯ ತಪ್ಪಿದ ಸಂದರ್ಭ ಹಿಂಬದಿ ಸೀಟಿನಲ್ಲಿದ್ದ ಮಹಿಳೆ ಬೈಕ್ ನಿಂದ ಜಾರಿ ರಸ್ತೆಗೆ ಬಿದ್ದಾಗ ಬಸ್ ಚಕ್ರಗಳು ಆಕೆಯ ಮೇಲೆ ಚಲಿಸಿದವು. ರವಿವಾರ ಸಂಜೆ ಥಾಣೆ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ದೃಶ್ಯಾವಳಿಗಳು ಸಿಸಿ ಟಿವಿಯಲ್ಲಿ ಸೆರೆಯಾಗಿವೆ. ಈ ದೃಶ್ಯ ಇದೀಗ ವಾಟ್ಸ್ಯಾಪ್ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಥಾಣೆಯ ಕಲ್ಯಾಣ್ ನಿವಾಸಿ ಮನೀಶಾ ಬೋರ್ ಎಂಬವರು ಸಾವಪ್ಪಿದ ಮಹಿಳೆಯಾಗಿದ್ದಾರೆ. ಬೈಕಿನಲ್ಲಿ ಗಂಡನೊಂದಿಗೆ ಹಿಂದಿನ ಸೀಟಿನಲ್ಲಿ ಕೂತಿದ್ದ ಮನೀಶಾ ಅವರು ಮಳೆ ಬರುತ್ತಿದ್ದಾಗ ಕೊಡೆ ಹಿಡಿದೇ ಕೂತಿದ್ದರು.

ಕಲ್ಯಾಣ್ ಶಿವಾಜಿ ಚೌಕ್ ತಲುಪಿದಾಗ ರಸ್ತೆಗಳಲ್ಲಿ ಮಳೆ ನೀರಿನಿಂದ ತುಂಬಿಕೊಂಡಿದ್ದ ಗುಂಡಿಗಳಲ್ಲಿ ಚಲಿಸಿದ ಬೈಕ್ ಆಯ ತಪ್ಪಿ ವಾಲಿ ಬಿದ್ದಿತ್ತು. ಈ ಸಂದರ್ಭ ವೇಗವಾಗಿ ಬಂದ ಬಸ್ ಚಕ್ರಗಳು ಮನೀಶಾ ಮೈಮೇಲೆ ಚಲಿಸಿದ್ದು, ಆಕೆ ಸ್ಥಳದಲ್ಲೇ ಸಾವಪ್ಪಿದರು.

ಕಳೆದ ಎರಡು ದಿನಗಳಿಂದ ಮುಂಬೈಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಜಲಾವೃತ ರಸ್ತೆಗಳಲ್ಲಿ ವಾಹನ ಸಂಚಾರ ಅಪಾಯಕಾರಿಯಾಗಿ ಪರಿಣಮಿಸಿದೆ.

Get real time updates directly on you device, subscribe now.