ಲಕ್ಷದ್ವೀಪದಲ್ಲಿ ಒಬ್ಬರಿಗೂ ಕೊರೋನ ಸೋಂಕು ಇಲ್ಲ

ಆರೋಗ್ಯ ಇಲಾಖೆ ಇಂದು ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಅನ್ವಯ ಲಕ್ಷದ್ವೀಪದಲ್ಲಿ ಕೊರೋನಾ ಸೋಂಕು ಪತ್ತೆಯಾಗಿಲ್ಲ

ಇಲ್ಲಿ ಆಸ್ಪತ್ರೆಗಳ ಸೌಲಭ್ಯ ಹೇಳಿಕೊಳ್ಳುವ ಮಟ್ಟದಲ್ಲಿ ಇಲ್ಲ. ಸೋಂಕು ಹಬ್ಬಿತೆಂದರೆ ಅದನ್ನು ತಡೆಯುವುದು ಕಷ್ಟವೇ.

ಕರಾವಳಿ ಕರ್ನಾಟಕ ವರದಿ
ನವದೆಹಲಿ: ಆರೋಗ್ಯ ಇಲಾಖೆ ಇಂದು ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಅನ್ವಯ ಲಕ್ಷದ್ವೀಪದಲ್ಲಿ ಒಂದೇ ಒಂದು ಕೊರೋನಾ ಸೋಂಕು ಪತ್ತೆಯಾಗಿಲ್ಲ ಎಂಬ ಕುತೂಹಲಕಾರಿ ಅಂಶ ಬೆಳಕಿಗೆ ಬಂದಿದೆ. ಮುವತ್ತೈದು ಸಣ್ಣ ದ್ವೀಪಗಳಿರುವ ಲಕ್ಷದ್ವೀಪ 64ಸಾವಿರ ಜನ ಸಂಖ್ಯೆ ಹೊಂದಿದೆ. ಕೇರಳ ಕರಾವಳಿ ತೀರಕ್ಕೆ ಹೊಂದಿಕೊಂಡಿರುವ ಲಕ್ಷದ್ವೀಪ ದಕ್ಷಿಣ ರಾಜ್ಯಗಳನ್ನು ವ್ಯವಹಾರಕ್ಕೆ ಅವಲಂಬಿಸಿದೆ.

ಇದೀಗ ಹೊರಗಿನಿಂದ ಬರುವ ಪ್ರಯಾಣಿಕರನ್ನು ತರುವ ಹಡಗುಗಳನ್ನು ಲಕ್ಷದ್ವೀಪಕ್ಕೆ ಬರುವುದನ್ನು ನಿಷೇಧಿಸಲಾಗಿದೆ ಎಂದು ತಿಳಿದುಬಂದಿದೆ. ಇಲ್ಲಿ ಆಸ್ಪತ್ರೆಗಳ ಸೌಲಭ್ಯ ಹೇಳಿಕೊಳ್ಳುವ ಮಟ್ಟದಲ್ಲಿ ಇಲ್ಲ. ಒಂದೊಮ್ಮೆ ಯಾರಿಗಾದರೂ ಸೋಂಕು ಬಂದು ಹಬ್ಬಿತೆಂದರೆ ಅದನ್ನು ತಡೆಯುವುದು ಕಷ್ಟವೇ. ಸದ್ಯ ಇಲ್ಲಿ ಯಾವುದೇ ಸೋಂಕಿತರಿಲ್ಲ ಎಂಬುದು ಅಲ್ಲಿಯ ಜನರಿಗೆ ಸಮಾಧಾನದ ಸಂಗತಿಯಾಗಿದೆ.

ದೇಶದಲ್ಲಿ ಅರುಣಾಚಲ ಪ್ರದೇಶ ಮಾತ್ರ ಸೋಂಕು ಮುಕ್ತ ಮೊದಲ ರಾಜ್ಯ. ಎಪ್ರಿಲ್ ತಿಂಗಳಲ್ಲಿ ಒಬ್ಬರಿಗೆ ಸೋಂಕು ತಗುಲಿ ಗುಣಮುಖರಾದ ಬಳಿಕ ಹೊಸ ಪ್ರಕರಣ ಯಾವುದೂ ವರದಿಯಾಗಿಲ್ಲ.

ನಾಗಾಲ್ಯಾಂಡ್ ನಲ್ಲೂ ಸೋಮವಾರ ತನಕ ಕೊರೋನಾ ಸೋಂಕು ಪತ್ತೆಯಾಗಿರಲಿಲ್ಲ. ಆದರೆ ಸೋಮವಾರ ಮೂವರು ಸೋಂಕಿತರಾಗಿದ್ದಾರೆ.  ಚೆನ್ನೈನಿಂದ ಶ್ರಮಿಕ್ ರೈಲಿನಲ್ಲಿ ಪ್ರಯಾಣಿಸಿರುವ ಹಿನ್ನೆಲೆಯಲ್ಲಿ ಮೂವರಿಗೆ ಸೋಂಕು ತಗಲಿರುವುದು ದೃಢವಾಗಿದೆ.

Get real time updates directly on you device, subscribe now.