ಕೇರಳ ಸಂಸದ ವೀರೇಂದ್ರ ಕುಮಾರ್ ನಿಧನ

ವಿರೇಂದ್ರ ಕುಮಾರ್ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಸಂದಿವೆ.

ಕರಾವಳಿ ಕರ್ನಾಟಕ ವರದಿ
ಕೋಯಿಕ್ಕೋಡ್:
ರಾಜ್ಯಸಭಾ ಸದಸ್ಯ ಎಂ.ಪಿ.ವೀರೇಂದ್ರ ಕುಮಾರ್(84) ರಾತ್ರಿ 11ಗಂಟೆಗೆ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಮರಣಹೊಂದಿದ್ದಾರೆ.

ವೀರೇಂದ್ರ ಕುಮಾರ್ ನಿಧನಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ತೀವೃ ಸಂತಾಪ ವ್ಯಕ್ತಪಡಿಸಿದ್ದಾರೆ.

ವೀರೇಂದ್ರ ಕುಮಾರ್ ಅವರು ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಪಿಟಿಐ ಸುದ್ದಿಸಂಸ್ಥೆ ನಿರ್ದೇಶಕ ಮಂಡಳಿ ಸದಸ್ಯ, ಅಧ್ಯಕ್ಷರೂ ಆಗಿದ್ದರು. ಕೇರಳದ ಮಾತೃಭೂಮಿ ಪತ್ರಿಕೆಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ವಿರೇಂದ್ರ ಕುಮಾರ್ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಸಂದಿವೆ.

ಪತ್ನಿ, ಪುತ್ರ ಮತ್ತು ಮೂವರು ಪುತ್ರಿಯರನ್ನು ವೀರೇಂದ್ರ ಕುಮಾರ್ ಅಗಲಿದ್ದಾರೆ. ವಯನಾಡ್‌ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

Get real time updates directly on you device, subscribe now.