80ಕೋಟಿ ಜನರಿಗೆ ನವೆಂಬರ್‌ ತನಕ ಪಡಿತರ ಉಚಿತ: ಪ್ರಧಾನಿ ಮೋದಿ

ದೇಶದ ಬಡ ಕಾರ್ಮಿಕರು ಯಾವುದೇ ರಾಜ್ಯದಲ್ಲಿದ್ದರೂ ಅವರಿಗೆ ಪಡಿತರ ಸಿಗುವ ನಿಟ್ಟಿನಲ್ಲಿ ‘ಒಂದೇ ದೇಶ, ಒಂದೇ ರೇಷನ್ ಕಾರ್ಡ್’ ಯೋಜನೆ ಶೀಘ್ರ ಜಾರಿಗೆ ಒತ್ತು.

ಕರಾವಳಿ ಕರ್ನಾಟಕ ವರದಿ
ನವದೆಹಲಿ: ಎಂಬತ್ತು ಕೋಟಿ ಜನರಿಗೆ ನವೆಂಬರ್ ತನಕ ಉಚಿತ ಪಡಿತರ ನೀಡಲಾಗುವುದೆಂದು ಪ್ರಧಾನಿ ನರೇಂದ್ರ ಮೋದಿ ಇಂದು ಸಂಜೆ 4ಗಂಟೆಯ ಭಾಷಣದಲ್ಲಿ ಘೋಷಣೆ ಮಾಡಿದ್ದಾರೆ. ದೇಶದ ಬಡ ಕಾರ್ಮಿಕರು ಯಾವುದೇ ರಾಜ್ಯದಲ್ಲಿದ್ದರೂ ಅವರಿಗೆ ಪಡಿತರ ಸಿಗುವ ನಿಟ್ಟಿನಲ್ಲಿ ‘ಒಂದೇ ದೇಶ, ಒಂದೇ ರೇಷನ್ ಕಾರ್ಡ್’ ಯೋಜನೆ ಶೀಘ್ರ ಜಾರಿಗೆ ಒತ್ತು ನೀಡುವುದಾಗಿ ಪ್ರಧಾನಿ ಹೇಳಿದರು.

ಇಂದು ದೇಶದ ಬಡವರಿಗೆ ಉಚಿತ ಪಡಿತರ ನೀಡಲು ಸರಕಾರ ಯಶಸ್ವಿಯಾಗಿದ್ದರೆ ಅದಕ್ಕೆ ದೇಶದ ರೈತರು ಮತ್ತು ಪ್ರಾಮಾಣಿಕ ತೆರಿಗೆದಾರರು ಕಾರಣ ಎಂದು ಪ್ರಧಾನಿ ಹೇಳಿದರು.

ಲಾಕ್‌ಡೌನ್ ಸಮಯದಲ್ಲಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿತ್ತು. ಈಗ ಅದರ ಹೊಣೆ ನಾಗರಿಕರದ್ದಾಗಿದೆ. ಯಾರಾದರೂ ಕೋವಿಡ್ ಮಾರ್ಗದರ್ಶಿ ಸೂತ್ರಗಳನ್ನು ಉಲ್ಲಂಘಿಸುತ್ತಿದ್ದರೆ ಹಾಗೆ ಮಾಡದಂತೆ ಅವರಿಗೆ ಹೇಳಿ ಎಂದು ಪ್ರಧಾನಿ ಹೇಳಿದರು.

Get real time updates directly on you device, subscribe now.