ಬಾಲಿವುಡ್ ಕೊರಿಯೊಗ್ರಾಫರ್ ಸರೋಜ್‌ಖಾನ್ ಹೃದಯಾಘಾತದಿಂದ ಮೃತ್ಯು

ಕರಾವಳಿ ಕರ್ನಾಟಕ ವರದಿ
ಮುಂಬೈ:
ಬಾಲಿವುಡ್ ಕೊರಿಯೊಗ್ರಾಫರ್ ಸರೋಜ್ ಖಾನ್(71) ಅವರು ಶುಕ್ರವಾರ ಮುಂಬೈ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.  ಬೆಳಗಿನ ಜಾವ 2:30ಗೆ ಮೃತಪಟ್ಟರು ಎಂದು ಸಂಬಂಧಿ ಮನೀಷ್ ಜಾಗ್ವಾನಿ ತಿಳಿಸಿದರು.

ಜೂ.20ರಂದು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಸರೋಜ್ ಖಾನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸಂದರ್ಭ ಕೋವಿಡ್ ನೆಗೆಟಿವ್ ವರದಿ ಬಂದಿತ್ತು.

ದೇವದಾಸ್ ಚಿತ್ರದ ಡೋಲಾರೆ ನೃತ್ಯದ ಕೊರಿಯೊಗ್ರಫಿ ಸೇರಿದಂತೆ ಹಲವು ಚಿತ್ರಗಳಿಗೆ ನೃತ್ಯ ನಿರ್ದೇಶನ ಮಾಡಿದ್ದ ಸರೋಜ್ ಖಾನ್ ಅವರು ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದರು.

ಪತಿ ಸೋಹನ್‌ಲಾಲ್, ಮಗ ರಾಜು, ಪುತ್ರಿಯರಾದ ಸುಕನ್ಯಾ ಮತ್ತು ಹಿನಾ ಅವರನ್ನು ಅಗಲಿದ್ದಾರೆ.

Get real time updates directly on you device, subscribe now.