ಮರಾಠಿ ನಟ ಆಶುತೋಷ್ ಭಕ್ರೆ ಆತ್ಮಹತ್ಯೆ

ಮರಾಠಿ ಚಿತ್ರಗಳಾದ ಭಕರ್ ಮತ್ತು ಇಚಾರ್ ಥಾರ್ಲಾ ಪಕ್ಕಾಗಳಲ್ಲಿ ನಟಿಸಿದ್ದರು.

ವ್ಯಕ್ತಿಯೋರ್ವ ಯಾಕೆ ಆತ್ಮಹತ್ಯೆಗೈಯುತ್ತಾನೆ ಎಂಬ ಬಗ್ಗೆ ವಿಡೀಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಸಂಗತಿ ಪೊಲೀಸ್ ಗಮನಕ್ಕೆ ಬಂದಿದೆ.

ಕರಾವಳಿ ಕರ್ನಾಟಕ ವರದಿ
ಮುಂಬೈ: ಮರಾಠಿ ನಟ ಆಶುತೋಷ್ ಭಕ್ರೆ(32) ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ವರದಿಯಾಗಿದೆ. ನಾಂದೇಡ್‌ ಗಣೇಶ್ ನಗರದಲ್ಲಿರುವ ಮನೆಯಲ್ಲೇ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಅವರ ಹೆತ್ತವರು ಬುಧವಾರ ನೋಡಿದ್ದರು.

ಆಶುತೋಷ್ ಮರಾಠಿ ಧಾರಾವಾಹಿ ಖುಲ್ಪಾ ಕಾಲಿ ಖುಲೆನಾ ಮೂಲಕ ಖ್ಯಾತಿ ಪಡೆದಿದ್ದರು. ಮರಾಠಿ ಚಿತ್ರಗಳಾದ ಭಕರ್ ಮತ್ತು ಇಚಾರ್ ಥಾರ್ಲಾ ಪಕ್ಕಾಗಳಲ್ಲಿ ನಟಿಸಿದ್ದರು.

ಖಿನ್ನತೆಯಿಂದ ಬಳಲುತ್ತಿದ್ದ ಆಶುತೋಷ್ ಕೆಲ ದಿನಗಳ ಹಿಂದೆ ವ್ಯಕ್ತಿಯೋರ್ವ ಯಾಕೆ ಆತ್ಮಹತ್ಯೆಗೈಯುತ್ತಾನೆ ಎಂಬ ಬಗ್ಗೆ ವಿಡೀಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಸಂಗತಿ ಪೊಲೀಸ್ ಗಮನಕ್ಕೆ ಬಂದಿದೆ.

ಆಶುತೋಷ್ ಅವರು ಪತ್ನಿ ಮತ್ತು ಖ್ಯಾತ ನಟಿ ಮಯೂರಿ ದೇಶ್‌ಮುಖ್ ಅವರನ್ನು ಅಗಲಿದ್ದಾರೆ.

Get real time updates directly on you device, subscribe now.