ನಂತೂರು ಅಪಘಾತ: ನವವಿವಾಹಿತರು ದಾರುಣ ಸಾವು

ಟೆಂಪೊ ಮತ್ತು ಸ್ಕೂಟರ್ ನಡುವಿನ ಅಪಘಾತ

In a tragic incident, a newly-married couple died in a road accident near Nanthoor circle here on Tuesday June 12.

ಮಂಗಳೂರು: ನಂತೂರು ಸರ್ಕಲ್ ಬಳಿ ಮಂಗಳವಾರ ಸಂಜೆ ಟೆಂಪೊ ಮತ್ತು ಸ್ಕೂಟರ್ ನಡುವಿನ ಅಪಘಾತದಲ್ಲಿ ಗಂಭೀರ ಗಾಯಗೊಂಡ ನವವಿವಾಹಿತ ದಂಪತಿ ದಾರುಣ ಸಾವಪ್ಪಿದ್ದಾರೆ.

ಮೃತರನ್ನು ಪುತ್ತೂರು ನಿವಾಸಿ ಸಮೀರ್ ಮತ್ತು ಪತ್ನಿ ಬೆಳ್ತಂಗಡಿ ನಿವಾಸಿ ಸಮ್ರೀನ್ ಎಂದು ಗುರುತಿಸಲಾಗಿದೆ.

ಅಪಘಾತಕ್ಕೊಳಗಾದ ಸ್ಕೂಟರ್

ಕಾಪುವಿನಿಂದ ಮಂಗಳೂರಿನ ಸಂಬಂಧಿಕರ ಮನೆಗೆ ಸ್ಕೂಟರ್ ನಲ್ಲಿ ತೆರಳುತ್ತಿದ್ದಾಗ ನಂತೂರು ಸರ್ಕಲ್ ಬಳಿ ಈಚರ್ ಟೆಂಪೊ ಹಿಂದಿನಿಂದ ಡಿಕ್ಕಿ ಹೊಡೆದಾಗ ಇವರು ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಪತ್ನಿ ಸಮ್ರೀನ್(26) ಕೆಲ ಹೊತ್ತಲ್ಲೇ ಸಾವಪ್ಪಿದ್ದರು. ಸಮೀರ್(30) ರಾತ್ರಿ ಸಾವಪ್ಪಿದ್ದಾರೆ.

ಸಮೀರ್ ಮತ್ತು ಸಮ್ರೀನ್ ಅವರು ನವವಿವಾಹಿತರಾಗಿದ್ದು ಇತ್ತೀಚೆಗಷ್ಟೇ ಗಲ್ಫ್ ನಿಂದ ಬಂದಿದ್ದರು ಎಂದು ತಿಳಿದುಬಂದಿದೆ.
ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Get real time updates directly on you device, subscribe now.