ಪಂಚಾಯತ್ ಶೌಚಾಲಯದಲ್ಲೇ ಪಿಡಿಓ ಆತ್ಮಹತ್ಯೆ

ಮುನ್ನೂರು ಪಂಚಾಯತ್ ಪಿಡಿಓ ಕೃಷ್ಣಸ್ವಾಮಿ ಆತ್ಮಹತ್ಯೆ

Krishnaswamy, panchayat development officer (PDO) of Munnur gram panchayat was found hanging in the toilet of the panchayat office on Wednesday

ಮಂಗಳೂರು: ಮುನ್ನೂರು ಪಂಚಾಯತ್ ಪಿಡಿಓ ಕೃಷ್ಣಸ್ವಾಮಿ(47) ಎಂಬವರು ಗ್ರಾಮ ಪಂಚಾಯತ್ ಕಚೇರಿಯ ಶೌಚಾಲಯದಲ್ಲಿ ನೇಣಿಗೆ ಶರಣಾಗಿರುವ ಕಳವಳಕಾರಿ ಘಟನೆ ಇಂದು ವರದಿಯಾಗಿದೆ.

ಧರ್ಮಸ್ಥಳ ನಿವಾಸಿ ಶಿವರಾಮ ಬಿ.ಎಸ್ ಎಂಬವರ ಪುತ್ರ ಕೃಷ್ಣಸ್ವಾಮಿ ಅವರು ಡೆತ್ ನೋಟ್ ಬರೆದಿಟ್ಟು ಕುತ್ತಾರು ಪದವಿನಲ್ಲಿರುವ ಮುನ್ನೂರು ಪಂಚಾಯತ್ ಕಚೇರಿ ಶೌಚಾಲಯದಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾರೆ.

ಮದ್ಯವ್ಯಸನಿಯಾಗಿದ್ದ ಕೃಷ್ಣಸ್ವಾಮಿ ಅವರು ನನ್ನ ಸ್ವಾಮಿಗೆ ನಾನೇ ಕಾರಣ. ಅನುಕಂಪದ ಆಧಾರದಲ್ಲಿ ಪತ್ನಿಗೆ ಕೆಲಸ ಕೊಡಿಸಿ ಎಂದು ಡೆತ್ ನೋಟ್ ಬರೆದಿದ್ದಾರೆ.

ಪತ್ನಿ ಮತ್ತು ಓರ್ವ ಪುತ್ರಿಯನ್ನು ಕೃಷ್ಣಸ್ವಾಮಿ ಅಗಲಿದ್ದು, ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Get real time updates directly on you device, subscribe now.